ಮಂಗಳೂರು, ಡಿ.06 (DaijiworldNews/AK): ಕಾಸರಗೋಡಿನಿಂದ ಮಲೆನಾಡು ಹೆದ್ದಾರಿ ಮೂಲಕ ಮುಡಿಪು ತನಕ ಅಂತಾರಾಜ್ಯ ಖಾಸಗಿ ಬಸ್ ಸಂಚಾರ ಇಂದಿನಿಂದ ಪ್ರಾರಂಭವಾಯಿತು. ಗ್ರಾಮೀಣ ಪ್ರದೇಶದ ಜನತೆಯ ಬಹುಕಾಲದ ಕನಸು ಇಂದು ಬಸ್ ಸಂಚಾರವಾಗುವುದರೊಂದಿಗೆ ನನಸಾಗಿದೆ.

ಕಾಸರಗೋಡು ಜಿಲ್ಲೆಯ ಹೆಸರಾಂತ ಬಸ್ ಕಂಪೆನಿ "ಮಹಾಲಕ್ಷ್ಮೀ ಟ್ರಾವೆಲ್ಸ್" ನ ಅತ್ಯಾಧುನಿಕ ಮಾದರಿಯ ಖಾಸಗಿ ಬಸ್ ಗಳೆರಡು ಇಂದು ಬೆಳಗ್ಗಿನಿಂದ ಸರ್ವಿಸ್ ಆರಂಭಿಸಿವೆ. ಒಂದು ಬಸ್ ಪ್ರತಿನಿತ್ಯ ಬೆಳಗ್ಗೆ 6.25 ಕ್ಕೆ ಪೆರ್ಮುದೆಯಿಂದ ಸೇವೆ ಆರಂಭಿಸಿ ಕಾಸರಗೋಡಿಗೆ 7.23 ಕ್ಕೆ ತಲುಪಲಿದೆ. ಕಾಸರಗೋಡಿನಿಂದ 7.42 ಕ್ಕೆ ಸೇವೆ ಆರಂಭಿಸಿ 9 ಗಂಟೆಗೆ ಪೆರ್ಮುದೆ ದಾರಿಯಾಗಿ 10.30 ಕ್ಕೆ ಮುಡಿಪು ಸೇರಲಿದೆ.
ಮುಡಿಪುವಿನಿಂದ 11.30 ಕ್ಕೆ ಹೊರಟು ಮಧ್ಯಾಹ್ನ 12.50 ಕ್ಕೆ ಪೆರ್ಮುದೆ ಮೂಲಕ 1.48 ಕ್ಕೆ ಕಾಸರಗೋಡಿಗೆ ತಲುಪಲಿದೆ. ಅಪರಾಹ್ನ 2.05ಕ್ಕೆ ಕಾಸರಗೋಡಿನಿಂದ ಹೊರಟು 3.03 ಕ್ಕೆ ಪೆರ್ಮುದೆ ಮೂಲಕ ಸಂಜೆ 4.30 ಕ್ಕೆ ಮುಡಿಪು ತಲುಪಲಿದೆ. ಮುಡಿಪಿನಿಂದ 5.05 ಕ್ಕೆ ಹೊರಟು ಪೆರ್ಮುದೆಗೆ 6.25 ಕ್ಕೆ ತಲುಪಿ ಕಾಸರಗೋಡಿಗೆ ರಾತ್ರಿ 7.23 ಕ್ಕೆ ಆಗಮಿಸಲಿದೆ. 7.35 ಕ್ಕೆ ಕಾಸರಗೋಡಿನಿಂದ ಹೊರಟು 8.33 ಕ್ಕೆ ಪೆರ್ಮುದೆ ತಲುಪಿ ಹಾಲ್ಟ್ ಆಗಲಿದೆ. ಇನ್ನೊಂದು ಬಸ್ ದಿನಂಪ್ರತಿ ಕುಂಬಳೆಯಿಂದ ಬೆಳಗ್ಗೆ 7.12 ಕ್ಕೆ ಹೊರಟು 8 ಗಂಟೆಗೆ ಪೆರ್ಮುದೆ ಮೂಲಕ 9.30 ಕ್ಕೆ ಮುಡಿಪು ತಲುಪಲಿದೆ. ಮುಡಿಪು ನಿಂದ 10.20 ಕ್ಕೆ ಹೊರಟು ಪೆರ್ಮುದೆಗೆ 11.50 ಕ್ಕೆ ತಲುಪಿ ಮಧ್ಯಾಹ್ನ 12.50 ಕ್ಕೆ ಕಾಸರಗೋಡಿಗೆ ಆಗಮಿಸಲಿದೆ. ಕಾಸರಗೋಡಿನಿಂದ 1.15 ಕ್ಕೆ ಟ್ರಿಪ್ ಆರಂಭಿಸಿ ಅಪರಾಹ್ನ 2.13 ಕ್ಕೆ ಪೆರ್ಮುದೆಗೆ ತಲುಪಿ 3.40ಕ್ಕೆ ಮುಡಿಪು ಸೇರಲಿದೆ. ಮುಡಿಪುನಿಂದ ಸಂಜೆ 4.10 ಕ್ಕೆ ಹೊರಟು 5.40 ಕ್ಕೆ ಪೆರ್ಮುದೆ ಮೂಲಕ 6.38 ಕ್ಕೆ ಕಾಸರಗೋಡು ತಲುಪಲಿದೆ.
ಕಾಸರಗೋಡಿನಿಂದ 6.45 ಕ್ಕೆ ಹೊರಟು ರಾತ್ರಿ 7.18 ಕ್ಕೆ ಸೀತಾಂಗೋಳಿ ತಲುಪಿ ಕುಂಬಳೆಯಲ್ಲಿ 7.30 ಕ್ಕೆ ಹಾಲ್ಟ್ ಆಗಲಿದೆ. ಈ ಬಸ್ ಗಳು ಕಾಸರಗೋಡಿನಿಂದ ವಿದ್ಯಾನಗರ - ಉಳಿಯತ್ತಡ್ಕ - ಸೀತಾಂಗೋಳಿ - ಅಂಗಡಿಮೊಗರು - ಪೆರ್ಮುದೆ ಚೇವಾರು - ಪೈವಳಿಕೆ - ಬಾಯಿಕಟ್ಟೆ – ಮೀಯಪದವು - ಮೊರತ್ತಣೆ - ಮಜೀರ್ಪಳ್ಳ - ಪಾವಳ - ಮೂರುಗೋಳಿ ಹೂ ಹಾಕುವಕಲ್ಲು ಮೂಲಕ ಮುಡಿಪು ರೂಟ್ನಲ್ಲಿ ಸಂಚಾರ ನಡೆಸಲಿವೆ. ಕಾಸರಗೋಡು ಜಿಲ್ಲೆಯ ಗ್ರಾಮೀಣ ಭಾಗಗಳ ಮೂಲಕವೇ ಬಸ್ ಸರ್ವೀಸ್ ನಡೆಯಲಿದ್ದು, ಆ ಮೂಲಕ ಗ್ರಾಮೀಣ ಪ್ರದೇಶಗಳ ಪ್ರಯಾಣಿಕರಿಗೆ ಇಂದಿನಿಂದ ಅನುಕೂಲವಾಗಲಿದೆ.