ಬಂಟ್ವಾಳ, ಡಿ.06 (DaijiworldNews/ AK): ಬಿ.ಸಿ.ರೊಡು- ಪುಂಜಾಲಕಟ್ಟೆ ಹೆದ್ದಾರಿಯ ವಗ್ಗ ಸಮೀಪದ ಬಾಂಬಿಲದಲ್ಲಿ ಕೆಎಸ್.ಆರ್.ಟಿಸಿ ಬಸ್ಸು ಹಾಗೂ ಬೈಕ್ ಢಿಕ್ಕಿಯಾಗಿ ಸವಾರ ಮೃತಪಟ್ಟ ಘಟನೆ ಗುರುವಾರ ರಾತ್ರಿ ನಡೆದಿದೆ.

ಬೆಳ್ತಂಗಡಿ ಪಡಂಗಡಿ ಗ್ರಾಮದ ಕನ್ನಡಿಕಟ್ಟೆ ನಿವಾಸಿ ರಾಜೇಂದ್ರ ಪೂಜಾರಿ (೪೫) ಮೃತಪಟ್ಟವರು. ಅವರು ಬಿ.ಸಿ.ರೋಡಿನಿಂದ ಬೆಳ್ತಂಗಡಿ ಕಡೆಗೆ ತೆರಳುತ್ತಿದ್ದ ವೇಳೆ ಘಟನೆ ನಡೆದಿದ್ದು, ಬಸ್ಸು ಬೆಳ್ತಂಗಡಿ ಭಾಗದಿಂದ ಮಂಗಳೂರಿಗೆ ತೆರಳುತ್ತಿತ್ತು.
ಬಸ್ಸು- ಬೈಕ್ ಢಿಕ್ಕಿ ಹೊಡೆದುಕೊಂಡ ಜಾಗದ ಅನತಿ ದೂರದಲ್ಲಿ ಬುಧವಾರ ಸಂಜೆ ಕಾರು ಹಾಗೂ ಆಟೋ ರಿಕ್ಷಾ ಢಿಕ್ಕಿ ಹೊಡೆದು ಮಹಿಳೆ ಮೃತಪಟ್ಟು, ಇತರ ಪ್ರಯಾಣಿಕರು ಗಾಯಗೊಂಡಿದ್ದರು.
ಮೃತ ರಾಜೇಂದ್ರ ಅವರು ಪತ್ನಿ ಹಾಗೂ ಮೂವರು ಪುತ್ರರನ್ನು ಅಗಲಿದ್ದಾರೆ. ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.