ಹೊಸದಿಲ್ಲಿ, ಡಿ 1: ನವೀಕೃತ ಮಾರುತಿ ಸೆಲೆರಿಯೊ ಎಕ್ಸ್ ಮಾದರಿಯ ಕಾರನ್ನು ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆ ಮಾರುತಿ ಸುಜುಕಿ ಇಂಡಿಯಾ ಬಿಡುಗಡೆಗೊಳಿಸಿದೆ.
ಏರೋಡೈನಾಮಿಕ್ ವಿನ್ಯಾಸ, ಮುಂಭಾಗದ ಗ್ರಿಲ್ನಲ್ಲಿ ಹೊಸತಾದ ಎಕ್ಸ್ ಥೀಮ್ ತಳಹದಿಯ ಗ್ರಾಫಿಕ್ಸ್, ರಿಯರ್ ಬಂಪರ್, ಸ್ಕಿಡ್ ಪ್ಲೇಟ್ ಡಿಟೈಲ್ ಆಕ್ರಮಣಕಾರಿ ಲುಕ್ ಹೊಂದಿರುವ ಈ ಕಾರು, ಭಾರತ ಮಾರುಕಟ್ಟೆಯಲ್ಲಿ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 4.57 ಲಕ್ಷ ರೂ.ಗಳಿಂದ 5.42 ಲಕ್ಷ ರೂ.ಗಳಷ್ಟು ದುಬಾರಿಯೆನಿಸಲಿದೆ.
ಮೂರು ಲಕ್ಷಕ್ಕೂ ಹೆಚ್ಚು ಸೆಲೆರಿಯೊ ಕಾರು ಭಾರತದಲ್ಲಿ ಮಾರಾಟವಾಗಿದ್ದು, ಇದೀಗ ಹೊಸತಾದ ಮಾದರಿಯೊಂದಿಗೆ ಮತ್ತೇ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.