ಪುತ್ತೂರು,ಡಿ.09(DaijiworldNews/AK): ಚಾಲಕನ ನಿಯಂತ್ರಣ ತಪ್ಪಿ ಆಂಬುಲೆನ್ಸ್ ವೊಂದು ಮನೆಯ ಅಂಗಳಕ್ಕೆ ಢಿಕ್ಕಿ ಹೊಡೆದ ಘಟನೆ ಉಪ್ಪಿನಂಗಡಿ ಸಮೀಪದ 34 ನೆಕ್ಕಿಲಾಡಿ ಎಂಬಲ್ಲಿ ನ.9ರಂದು ಬೆಳಗ್ಗೆ ನಡೆದಿದೆ.

ಆಂಬುಲೆನ್ಸ್ ಪುತ್ತೂರಿನಿಂದ ನೆಕ್ಕಿಲಾಡಿ ಕಡೆಗೆ ತೆರಳುತ್ತಿತ್ತು. ವನಸುಮ ನರ್ಸರಿ ರಸ್ತೆಯಲ್ಲಿ ಹೋಗುತ್ತಿದ್ದಾಗ ಏಕಾಏಕಿ ಒಂದು ಬದಿಗೆ ತೂಗಾಡುತ್ತಾ ರಸ್ತೆ ಬದಿಯ ಮನೆಯೊಂದರ ಅಂಗಳವನ್ನು ಪ್ರವೇಶಿಸಿತು. ಅಪಘಾತದಲ್ಲಿ ಕಾಂಪೌಂಡ್ ಗೋಡೆಗೆ ಹಾನಿಯಾಗಿದೆ. ಮನೆಯ ಗೋಡೆಗೆ ಡಿಕ್ಕಿ ಹೊಡೆದ ರಭಸಕ್ಕೆ ವಾಹನ ತಪ್ಪಿದೆ. ರಸ್ತೆಯ ಬಳಿ ಶಾಲಾ ಮಕ್ಕಳು ನಿಂತಿದ್ದು, ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾರೆ.
ಆಂಬುಲೆನ್ಸ್ ಕನ್ಯಾಡಿಯ ಸೇವಾ ಭಾರತಿಗೆ ಸೇರಿದ್ದು, ಆರೋಗ್ಯ ಶಿಬಿರದಲ್ಲಿ ಪಾಲ್ಗೊಳ್ಳಲು ತೆರಳುತ್ತಿತ್ತು. ಆಂಬ್ಯುಲೆನ್ಸ್ ಚಾಲಕ ಕೂಡ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ.