ಬೆಳ್ತಂಗಡಿ, ಜೂ 07 (Daijiworld News/MSP): ಮಂಗಳೂರು - ಧರ್ಮಸ್ಥಳ ರಸ್ತೆಯ ಪಣಕಜೆ ಎಂಬಲ್ಲಿ ಕೆ.ಎಸ್.ಆರ್.ಟಿ.ಸಿ.ಬಸ್ ಹಾಗೂ ಒಮ್ನಿ ಕಾರು ನಡುವೆ ಅಪಘಾತ ಸಂಭವಿಸಿ ಕಾರು ಚಾಲಕ ಗಂಭೀರ ಗಾಯಗೊಂಡ ಘಟನೆ ಜೂ 07ರ ಶುಕ್ರವಾರ ಮಧ್ಯಾಹ್ನ ನಡೆದಿದೆ.
ಗಾಯಗೊಂಡ ಕಾರು ಚಾಲಕ ಮಡಂತ್ಯಾರು ನಿವಾಸಿ ಪಿ.ವಿ.ಭಟ್ ಎಂದು ಗುರುತಿಸಲಾಗಿದೆ. ರಾಜ್ಯ ಹೆದ್ದಾರಿ ಮಂಗಳೂರು ಕಡೂರು ರಸ್ತೆಯ ಮಡಂತ್ಯಾರು ಸಮೀಪದ ಪಣಕಜೆ ಎಂಬಲ್ಲಿ ಕೆ.ಎಸ್.ಆರ್.ಟಿ.ಸಿ.ಹಾಗೂ ಒಮ್ನಿ ಕಾರು ಮಧ್ಯೆ ಢಿಕ್ಕಿಯಾಗಿದೆ. ಕಾರಿನಲ್ಲಿ ಚಾಲಕ ಇದ್ದು ಅವರ ಬೆನ್ನಿಗೆ ಹಾಗೂ ತಲೆಗೆ ಗಾಯಗಳಾಗಿವೆ.
ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಪುಂಜಾಲಕಟ್ಟೆ ಎಸ್.ಐ.ಸುನೀತಾ, ಹಾಗೂ ಸಿಬ್ಬಂದಿ ಅಬುಬಕ್ಕರ್ ಹಾಗೂ ಚಾಲಕ ಸತ್ಯಪ್ರಕಾಶ್ ಬೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ.