ಕಾಸರಗೋಡು, ಡಿ.10(DaijiworldNews/AA): ಓಮ್ನಿ ವ್ಯಾನ್ ಮತ್ತು ಲಾರಿ ಡಿಕ್ಕಿ ಹೊಡೆದು ಸುಳ್ಯ ನಿವಾಸಿ ಮೃತಪಟ್ಟ ಘಟನೆ ಮಂಗಳವಾರ ಸಂಜೆ ಆದೂರು ಕುಂಟಾರಿನಲ್ಲಿ ನಡೆದಿದೆ.

ಅಜ್ಜಾವರ ಕಯುತ್ತಡ್ಕ ಮುಹಮ್ಮದ್ ಕುಂಞ (65) ಮೃತಪಟ್ಟವರು.
ಕಾಸರಗೋಡಿನಿಂದ ಸುಳ್ಯಕ್ಕೆ ಓಮ್ನಿ ವ್ಯಾನ್ ನಲ್ಲಿ ತೆರಳುತ್ತಿದ್ದಾಗ ಈ ಅಪಘಾತ ನಡೆದಿದೆ. ಗಂಭೀರ ಗಾಯಗೊಂಡ ಮುಹಮ್ಮದ್ ಕುಂಞರವರನ್ನು ಚೆಂಗಳದ ಆಸ್ಪತ್ರೆಗೆ ತಲಪಿಸಿದರೂ ಜೀವ ಉಳಿಸಲಾಗಲಿಲ್ಲ. ಆದೂರು ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ