ಕಾಸರಗೋಡು, ಡಿ.10(DaijiworldNews/AA): ಮಾರಕಾಸ್ತ್ರ ಸಹಿತ ಬಂಟ್ವಾಳ ನಿವಾಸಿಯೋರ್ವನನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ.

ಬಂಟ್ವಾಳದ ಹ್ಯಾಡ್ಲಿ ಜೋಕಿಂ ಕ್ಯಾಸ್ಟಲಿನೋ(23) ಬಂಧಿತ ಆರೋಪಿ.
ಕುಂಬಳೆಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಈ ದಾರಿಯಾಗಿ ಬಂದ ಕಾರನ್ನು ತಡೆದು ತಪಾಸಣೆ ನಡೆಸಿದಾಗ ಮಾರಕಾಸ್ತ್ರ ಪತ್ತೆಯಾಗಿದೆ. ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.