ಕಾರ್ಕಳ, ,ಡಿ. 11(DaijiworldNews/ AK): ಕುದುರೆಮುಖ ರಕ್ಷಿತಾರಣ್ಯ ಪ್ರದೇಶದಲ್ಲಿ ತಂಡವೊಂದು ಗುಂಡುಹಾರಿಸಿ ಕಡವೆ ಜಾತಿಯ ವನ್ಯಪ್ರಾಣಿಯನ್ನು ಹತ್ಯೆಗೈದಿರುವ ಮಾಹಿತಿ ಬೆಳಕಿಗೆ ಬಂದಿದೆ. ಹತ್ಯೆಗೀಡಾದ ಭಾರೀ ಗಾತ್ರದ ಕಡವೆಯನ್ನು ಹೊತ್ತು ತಂದ ತಂಡದಲ್ಲಿ ಹತ್ತು ಮಂದಿ ಭಾಗಿಯಾಗಿದ್ದು, ಇಬ್ಬರ ವಿರುದ್ಧ ಮಾತ್ರ ಕೇಸು ದಾಖಲಾಗಿರುವ ಬಗ್ಗೆ ಆರೋಪ ಕೇಳಿಬರುತ್ತಿವೆ.

ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಒಂದಾಗಿರುವ ಬೆಳ್ತಂಗಡಿ ತಾಲೂಕು ಕುತ್ಲೂರು ಗ್ರಾಮದ ಹೌತೊಟ್ಟು ಎಂಬಲ್ಲಿ ಅಕ್ಟೋಬರ್ ೨28ರಂದು ಈ ಘಟನೆ ನಡೆದಿತ್ತು.ಪ್ರಕರಣದಲ್ಲಿ ಒಂದನೇ ಆರೋಪಿ ಎಂದು ದಾಖಲಾಗಿರುವ ಸಂದೇಶ್ ಪೂಜಾರಿಯ ಮನೆಯಲ್ಲಿ ಕಡವೆ ಜಾತಿಯ ವನ್ಯಪ್ರಾಣಿಯ ಮಾಂಸ ತಯಾರಿಸಲಾಗಿದ್ದು, ಅದನ್ನು ರಾಧಾಕೃಷ್ಣ ಪೂಜಾರಿಯ ಕೋಳಿ ಅಂಗಡಿಯಲ್ಲಿ ಮಾರಾಟ ಮಾಡಿರುವ ಮಾಹಿತಿ ಬೆಳಕಿಗೆ ಬಂದಿದೆ.
ಕೆ.ಜಿ.ವೊಂದಕ್ಕೆ ೧೦೦೦ದಂತೆ ಮಾರಾಟ ಮಾಡಿರುವ ವಿಚಾರದಲ್ಲಿ ಸ್ಥಳೀಯರಲ್ಲಿ ಉಂಟಾದ ಜಗಳವು ಕಡವೆ ಜಾತಿಯ ವನ್ಯಪ್ರಾಣಿಯ ಹತ್ಯೆ ಪ್ರಕರಣ ಬೆಳಕಿಗೆ ಬರಲು ಕಾರಣವೆನ್ನಲಾಗಿದೆ.
ಈ ಕುರಿತು ಮಂಗಳೂರು ಅರಣ್ಯ ಸಂಚಾರಿದಳಕ್ಕೆ ಬಂದಿದ್ದ ಖಚಿತ ಮಾಹಿತಿಯನ್ವಯ ಕಾರ್ಯಚರಣೆ ನಡೆದಿದೆ. ವೇಣೂರು ಅರಣ್ಯಧಿಕಾರಿ ಸುಬ್ರಹ್ಮಣ್ಯ ಆಚಾರ್ ನೇತೃತ್ವದಲ್ಲಿ ಅರಣ್ಯ ಸಿಬ್ಬಂದಿಗಳು ಕಾರ್ಯಚರಣೆ ನಡೆಸಿದ್ದರು. ಸಂದೇಶ್ ಪೂಜಾರಿ(46), ರಾಧಾಕೃಷ್ಣ ಪೂಜಾರಿ (47) ವಿರುದ್ಧ ಪ್ರಕರಣ ದಾಖಲಾಗಿದ್ದರೂ, ಅವರಿಬ್ಬರು ತಲೆ ಮರೆಸಿಕೊಂಡಿದ್ದಾರೆ.
ಪ್ರಕರಣದ ಕುರಿತು ಅರಣ್ಯ ಇಲಾಖಾಧಿಕಾರಿಗಳು ನಡೆಸಿರುವ ತನಿಖೆ ಪರಿಪೂರ್ಣ ಅಲ್ಲ ಎಂಬ ಆರೋಪವೂ ಕೇಳಿಬರುತ್ತಿದೆ.
ಕುದುರೆಮುಖ ರಕ್ಷಿತಾರಣ್ಯ ಪ್ರದೇಶದಲ್ಲಿ ಕಂಡುಬರುವ ತಹ ಕಡವೆ ಸುಮಾರು ೧೫೦ ಕೆ.ಜಿ ಭಾರವೊಂದಿರುತ್ತದೆ. ಅದರಲ್ಲೂ ಮರಿ ಕಡವೆಗಳೇ ಸುಮಾರು ೪೦ ಕೆ.ಜಿ ಭಾರವೊಂದಿರುತ್ತದೆ ಎಂಬ ವಿಚಾರವು ಹಿರಿಯ ಅರಣ್ಯಾಧಿಕಾರಿಯೊಬ್ಬರು ಮಾಧ್ಯಮಕ್ಕೆ ವಿವರಿಸಿದ್ದಾರೆ.ಅಷ್ಟೊಂದು ಭಾರದ ಕಡವೆ ಜಾತಿಯ ವನ್ಯಪ್ರಾಣಿಯನ್ನು ಗುಂಡಿಟ್ಟು ಹತ್ಯೆಗೈದ ಬಳಿಕ ಪ್ರಕರಣದಲ್ಲಿ ಹೆಸರಿಸಲಾಗಿರುವ ಆರೋಪಿಗಳಿಬ್ಬರಿಂದ ಹೊತ್ತು ಸಾಗಿಸಲು ಸಾಧ್ಯವೇ ಎನ್ನುವ ಪ್ರಶ್ನೆಗಳು ಇಲ್ಲಿ ಸಹಜವಾಗಿ ಕಡುತ್ತದೆ.
ಪ್ರಮುಖ ಆರೋಪಿ ಸಂದೇಶ್ ಪೂಜಾರಿಯ ಮನೆಯಂಗಳದಲ್ಲಿ ಅರಣ್ಯ ಇಲಾಖಾಧಿಕಾರಿಗಳು ಪತ್ತೆ ಹಚ್ಚಲಾಗಿದ್ದ ತಡಪಾಲಿನಲ್ಲಿ ರಕ್ತದ ಕಲೆಯೂ ಕಂಡಬಂದಿದ್ದು, ಅದರಲ್ಲಿ ಕಡವೆ ಜಾತಿಯ ವನ್ಯಪ್ರಾಣಿಯ ಮಾಂಸ ತಯಾರಿಸಲಾಗಿದೆ ಎಂದು ಮೇಲ್ನೋಟಕ್ಕೆ ದೃಢಪಟ್ಟಿದೆ.ಹೀಗಿರುವಾಗ ಸಂದೇಶ್ ಪೂಜಾರಿಯ ಮನೆಯಂಗಳದ ವರೆಗೆ ಕಡವೆ ಜಾತಿಯ ವನ್ಯಪ್ರಾಣಿಯನ್ನು ಹೊತ್ತು ತಂದವರು ಯಾರೆಂಬ ಪ್ರಶ್ನೆಗಳು ಇಲ್ಲಿ ಕಾಡುತ್ತಿದೆ. ಕಡವೆ ಜಾತಿಯ ವನ್ಯಪ್ರಾಣಿಯನ್ನು ಹತ್ಯೆಗೆ ಬಳಸಲಾಗಿರುವ ಆಯುಧಗಳನ್ನು ಅರಣ್ಯ ಇಲಾಖೆ ವಶಪಡಿಸಿದ ಮಾಹಿತಿ ಲಭ್ಯವಿಲ್ಲ.
ಕಡವೆ ಜಾತಿಯ ವನ್ಯಪ್ರಾಣಿಯ ಮಾಂಸವನ್ನು ಆರೋಪಿಗಳಲ್ಲಿ ಓರ್ವನಾಗಿರುವ ರಾಧಾಕೃಷ್ಣ ಪೂಜಾರಿ ತನ್ನ ಕೋಳಿ ಅಂಗಡಿಯಲ್ಲಿ ಮಾರಾಟ ಮಾಡಿರುವ ಕುರಿತು ಸ್ಥಳೀಯರು ಆರೋಪಿಸಿದ್ದರೂ, ಆತನ ಮನೆಯಲ್ಲಿ ಕುಕ್ಕರ್ನಲ್ಲಿ ಬೇಯಿಸಿಟ್ಟ ಕಡವೆ ಜಾತಿಯ ವನ್ಯಪ್ರಾಣಿಯ ೪.೫ ಕೆ.ಜಿ ಮಾಂಸ ಹಾಗೂ ಪ್ರಮುಖ ಆರೋಪಿ ಆರೋಪಿ ಸಂದೇಶ್ ಪೂಜಾರಿಯ ಮನೆಯ ಅಡುಗೆ ಕೋಣೆಯಲ್ಲಿ ಫಿಡ್ಜ್ನಲ್ಲಿ ಇರಿಸಲಾಗಿದ್ದ ಪ್ಲಾಸ್ಟಿಕ್ ಕವರ್ನಲ್ಲಿ ಮುಚ್ಚಿಡಲಾಗಿದ್ದ ಕಡವೆ ಜಾತಿಯ ವನ್ಯಪ್ರಾಣಿಯ ೧ ಕೆ.ಜಿ ಮಾಂಸ ಪತ್ತೆ ಹಚ್ಚಲು ಅರಣ್ಯ ಇಲಾಖಾಧಿಕಾರಿಗಳಿಗೆ ಸಾಧ್ಯವಾಗಿದೆ.
ಕಡವೆ ಜಾತಿಯ ವನ್ಯಪ್ರಾಣಿಯನ್ನು ಹತ್ಯೆಗೈದ ಬಳಿಕ ಅದರ ತ್ಯಾಜ್ಯ, ಎಲುಬು, ಚರ್ಮ ಇದ್ಯಾವುದನ್ನು ಪತ್ತೆ ಹಚ್ಚಿರುವ ವಿವರಗಳು ಅರಣ್ಯ ಇಲಾಖೆಯ ಕಡತರದಲ್ಲಿ ದಾಖಲಾಗದೇ ಇರುವುದು ಹಲವು ಅನುಮಾಗಳಿಗೆ ಎಡೆಮಾಡಿದೆ.
ಕಾಡು ಸಂಪತ್ತು ರಕ್ಷಿಸುವ ಹೊಣೆಗಾರಿಕೆ ಅರಣ್ಯ ಇಲಾಖೆ ಹಾಗೂ ಇಡೀ ಸಮಾಜದಾಗಿದೆ. ಕಾಡು ಸಂಪತ್ತು ಕೊಳ್ಳೆಹೊಡೆಯುವವರನ್ನು ಎಡೆಮುರಿ ಕಟ್ಟುವ ಕಾಯಕಕ್ಕೆ ಅರಣ್ಯ ಇಲಾಖೆ ಮುಂದಾಗಲೇ ಬೇಕೆಂಬ ಆಗ್ರಹ ಕೇಳಿಬರುತ್ತಿವೆ.