ಮಂಗಳೂರು, ಡಿ.11(DaijiworldNews/AA): ಅಂತರಾಷ್ಟ್ರೀಯ ವಿಮಾನ ಸಂಪರ್ಕಕ್ಕೆ ಪ್ರಮುಖ ಉತ್ತೇಜನ ನೀಡುವ ನಿಟ್ಟಿನಲ್ಲಿ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ತನ್ನ ಮೊದಲ ಆಗ್ನೇಯ ಏಷ್ಯಾದ ಗಮ್ಯಸ್ಥಾನಕ್ಕೆ ಸಂಪರ್ಕ ಕಲ್ಪಿಸಲಿದೆ. ಅದರಂತೆ 2025ರ ಜನವರಿ 21ರಿಂದ ಮಂಗಳೂರು-ಸಿಂಗಾಪೂರ ನಡುವೆ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ ಸೇವೆ ಆರಂಭವಾಗಲಿದೆ.


ಜಾಗತಿಕವಾಗಿ ಹೆಸರಾಂತ ವ್ಯಾಪಾರ ಕೇಂದ್ರವಾಗಿರುವ ಸಿಂಗಾಪುರಕ್ಕೆ ಇದೀಗ ಮಂಗಳೂರಿನಿಂದ ಏರ್ ಇಂಡಿಯಾ ಎಕ್ಸ್ಪ್ರೆಸ್ ತಡೆರಹಿತ ವಿಮಾನಗಳನ್ನು ಒದಗಿಸಿದೆ. ವಾರದಲ್ಲಿ ಎರಡು ದಿನ ಅಂದರೆ ಮಂಗಳವಾರ ಮತ್ತು ಶುಕ್ರವಾರದಂದು ಮಂಗಳೂರಿನಿಂದ ಸಿಂಗಾಪುರಕ್ಕೆ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ ಸೌಲಭ್ಯ ಕಲ್ಪಿಸಲಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಸಂತಸ ವ್ಯಕ್ತ ಪಡಿಸಿದ ದ.ಕ ಸಂಸದ ಬ್ರಿಜೇಶ್ ಚೌಟ ಹೊಸ ವರ್ಷದ ಸಂದರ್ಭದಲ್ಲಿ ಮಂಗಳೂರು ಹಾಗೂ ಸಿಂಗಾಪುರ ನಡುವೆ ಎರಡು ನೇರ ವಿಮಾನಗಳ ಸಂಚಾರ ಆರಂಭವಾಗಲಿದೆ ಎಂಬ ವಿಷಯ ಅದ್ಭುತವಾಗಿದೆ. ಇದರೊಂದಿಗೆ ಏರ್ ಇಂಡಿಯಾದ ಪುಣೆ ಮತ್ತು ದೆಹಲಿಗೆ ಸಂಪರ್ಕ ಕಲ್ಪಿಸುವ ಎರಡು ಹೊಸ ವಿಮಾನಗಳು ಆರಂಭವಾಗಲಿದೆ.
ಸಿಂಗಾಪುರದ ಮ್ಲೋರ್ ಮತ್ತು ಚಾಂಗಿ ನಡುವೆ ಉತ್ತಮ ನೇರ ವಿಮಾನ ಸಂಪರ್ಕಕ್ಕಾಗಿ ಅನೇಕ ವಿನಂತಿಗಳು ಬಂದಿದ್ದವು. ನಾನು ನಾಗರಿಕ ವಿಮಾನಯಾನ ಸಚಿವರಿಗೆ ಪತ್ರ ಬರೆದಿದ್ದೆ. ಇದೀಗ ಮ್ಲೋರ್ ಮತ್ತು ಚಾಂಗಿ ನಡುವೆ ಹೊಸ ಫ್ಲೈಟ್ಗಳು ಆರಂಭವಾಗಿದೆ. ಇದರಿಂದ ವ್ಯಾಪಾರ ಹಾಗೂ ಪ್ರಯಾಣ ಸುಲಭಗೊಳ್ಳಲಿದೆ ಎಂದು ಪೋಸ್ಟ್ ಮಾಡಿದ್ದಾರೆ.
ಫೆಬ್ರವರಿ 1 ರಿಂದ ದೆಹಲಿಗೆ ದೈನಂದಿನ ನೇರ ವಿಮಾನಗಳು
ಏರ್ ಇಂಡಿಯಾ ಎಕ್ಸ್ಪ್ರೆಸ್ 2025ರ ಫೆಬ್ರವರಿ 1ರಿಂದ ಮಂಗಳೂರು ಮತ್ತು ದೆಹಲಿ ನಡುವೆ ದೈನಂದಿನ ತಡೆರಹಿತ ವಿಮಾನಯಾನ ಪ್ರಾರಂಭವಾಗಲಿದೆ. ಈ ಮಾರ್ಗದಲ್ಲಿ ಆರಂಭವಾಗುವ ವಿಮಾನಯಾನವು ವ್ಯಾಪಾರ, ಪ್ರಯಾಣಿಕರು, ಪ್ರವಾಸಿಗರನ್ನು ಪೂರೈಸುವ ಗುರಿಯನ್ನು ಹೊಂದಿದೆ.
ಫೆಬ್ರವರಿ 1ರಿಂದ ಮಂಗಳೂರಿನಿಂದ ಪುಣೆಗೆ ಪ್ರತಿ ಶನಿವಾರ 2 ನೇರ ವಿಮಾನಗಳು
ಫೆಬ್ರವರಿ 1 ರಿಂದ ಮಂಗಳೂರಿಗೆ ಪ್ರತಿ ಶನಿವಾರ ಎರಡು ನೇರ ವಿಮಾನಗಳೊಂದಿಗೆ ಪುಣೆಗೆ ಸಂಪರ್ಕ ಕಲ್ಪಿಸಲಾಗುವುದು.
ಪುಣೆ ಮಾರ್ಗದ ವಿಮಾನ ವೇಳಾಪಟ್ಟಿ:
ಮಂಗಳೂರಿನಿಂದ ಪುಣೆ: 08:00 ಮತ್ತು 18:30
ಪುಣೆಯಿಂದ ಮಂಗಳೂರು: 09:55 ಮತ್ತು 20:35