ಕಾಸರಗೋಡು, ಡಿ.12(DaijiworldNews/AA): ಯುವಕನೋರ್ವ ನಿಗೂಢ ರೀತಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಆದೂರು ಠಾಣಾ ವ್ಯಾಪ್ತಿಯ ಮುಳಿಯಾರು ಮೂಲಾಡ್ಜ ಎಂಬಲ್ಲಿ ನಡೆದಿದೆ.

ಕಾವುಪಾಡಿ ನಿವಾಸಿ ರಾಶಿದ್ (24) ಮೃತಪಟ್ಟ ಯುವಕ.
ಮೂಲಡ್ಕ - ಪುಳಕ್ಕರ ರಸ್ತೆಯ ಮರದ ಬುಡದಲ್ಲಿ ಕುಳಿತ ಸ್ಥಿತಿಯಲ್ಲಿ ಮೃತದೇಹ ಮೃತದೇಹ ಪತ್ತೆಯಾಗಿತ್ತು. ದೇಹದಲ್ಲಿ ಗಾಯದ ಗುರುತುಗಳು ಹಾಗೂ ಕಾಲಿನಲ್ಲಿ ರಕ್ತ ಹರಿಯುತ್ತಿತ್ತು ಎಂದು ತಿಳಿದುಬಂದಿದೆ. ಇನ್ನು ಕೊಲೆ ಎಂಬ ಅನುಮಾನ ಉಂಟಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಣ್ಣೂರು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.
ಬುಧವಾರ ಸಂಜೆಯಿಂದ ರಾಶಿದ್ ನಾಪತ್ತೆಯಾಗಿದ್ದು, ಮನೆಯವರು ಮೊಬೈಲ್ ಗೆ ಸಂಪರ್ಕಿಸಿದರೂ ಸ್ವಿಚ್ಡ್ ಆಫ್ ಆಗಿತ್ತು. ಪರಿಸರದಲ್ಲಿ ಹುಡುಕಾಟ ನಡೆಸಿದಾಗ ಶೆಡ್ ನಿಂದ ಸುಮಾರು 50 ಮೀಟರ್ ದೂರದ ಮರವೊಂದರ ಬುಡದಲ್ಲಿ ಕುಳಿತಲ್ಲೇ ಮೃತಪಟ್ಟ ಸ್ಥಿತಿಯಲ್ಲಿ ರಾಶಿದ್ ಪತ್ತೆಯಾಗಿದ್ದಾನೆ.
ರಾಶಿದ್ ಬೆಂಗಳೂರಿನಲ್ಲಿರುವ ಸಹೋದರನ ಹೋಟೆಲ್ನಲ್ಲಿ ಸಹಾಯಕನಾಗಿ ದುಡಿಯುತ್ತಿದ್ದನು. ದಿನಗಳ ಹಿಂದೆಯಷ್ಟೇ ಊರಿಗೆ ಬಂದಿದ್ದನು. ಒಂದೆರಡು ದಿನದಲ್ಲಿ ಬೆಂಗಳೂರಿಗೆ ಮರಳುವ ಸಿದ್ಧತೆಯಲ್ಲಿದ್ದು, ಈ ನಡುವೆ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಆದೂರು ಠಾಣಾ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಮಹಜರು ನಡೆಸಿದ್ದಾರೆ.
ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರು ಮಾಹಿತಿ ಕಲೆ ಹಾಕಿದ್ದಾರೆ. ಮರಣೋತ್ತರ ಪರೀಕ್ಷಾ ವರದಿ ಲಭಿಸಿದ ಬಳಿಕ ಸಾವಿಗೆ ಸ್ಪಷ್ಟ ಕಾರಣ ತಿಳಿದುಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.