ಮಂಗಳೂರು, ಡಿ.12(DaijiworldNews/AA): ಮನಪಾ ವ್ಯಾಪ್ತಿಯಲ್ಲಿ ನೆಲೆಸಿರುವ 30ಕ್ಕಿಂತ ಹೆಚ್ಚಿನ ಫ್ಲಾಟ್ಗಳನ್ನು ಹೊಂದಿರುವ ಅಪಾರ್ಟ್ಮೆಂಟ್ಗಳು, 5,000 ಚದರ ಅಡಿಗೂ ಅಧಿಕ ವಿಸ್ತೀರ್ಣದ ಸಂಕೀರ್ಣಗಳು, ಉದ್ದಿಮೆ ಮತ್ತು ವ್ಯಾಪಾರಸ್ಥರು, ಮಾಲ್ಗಳು, ವಾಣಿಜ್ಯ ಸಂಸ್ಥೆಗಳು, ಪೂಜಾ ಸ್ಥಳಗಳು, ಸಾರ್ವಜನಿಕ ವಲಯದ ಉದ್ದಿಮೆಗಳು, ಖಾಸಗಿ ಕಂಪೆನಿಗಳು ಹಾಗೂ ಇನ್ನಿತರ ಇಲಾಖೆಗಳು ಪ್ರತಿ ನಿತ್ಯ ತಮ್ಮ ಉದ್ದಿಮೆಯಿಂದ ಸರಾಸರಿ 100 ಕೆ.ಜಿಗಿಂತ ಹೆಚ್ಚು ತ್ಯಾಜ್ಯ ಉತ್ಪಾದಿಸುವ ಬೃಹತ್ ತ್ಯಾಜ್ಯ ಉತ್ಪಾದಕರು ತಮ್ಮಲ್ಲಿ ಉತ್ಪಾದನೆಯಾಗುವ ಘನ ತ್ಯಾಜ್ಯವನ್ನು 3 ವಿಧದಲ್ಲಿ ವಿಂಗಡಿಸಿ, ಹಸಿ ತ್ಯಾಜ್ಯವನ್ನು ತಮ್ಮ ಆವರಣದಲ್ಲಿಯೇ ಸಂಸ್ಕರಿಸಿ ಗೊಬ್ಬರ ಉತ್ಪತ್ತಿ ಮಾಡುವ ಕುರಿತು ಅಗತ್ಯ ಕ್ರಮವನ್ನು 2025 ಜನವರಿ 15ರ ವರೆಗೆ ಸಮಯಾವಕಾಶ ವನ್ನು ನಿಗದಿಪಡಿಸಲಾಗಿದೆ ಎಂದು ಮಹಾ ನಗರಪಾಲಿಕೆ ಆಯುಕ್ತರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಜನವರಿ-2025ರ ಅಂತ್ಯದಲ್ಲಿ ಮನಪಾ ವ್ಯಾಪ್ತಿಯ ಬೃಹತ್ ತ್ಯಾಜ್ಯಉತ್ಪಾದಕರು ಹಸಿ ತ್ಯಾಜ್ಯವನ್ನು ತಮ್ಮ ಆವರಣದಲ್ಲಿಯೇ ಸಂಸ್ಕರಿಸಿ ವಿಲೇವಾರಿ ಮಾಡಲು ವಿಫಲವಾದಲ್ಲಿ ಘನ ತ್ಯಾಜ್ಯ ನಿರ್ವಹಣೆ ನಿಯಮಗಳು 2016 ಮತ್ತು ಮನಪಾ ಘನ ತ್ಯಾಜ್ಯ ನಿರ್ವಹಣೆ ಬೈಲಾ-2019ರ ಪ್ರಕಾರ 15,000ರೂ. ದಂಡ ವಿಧಿಸಲಾಗುತ್ತದೆ ಎಂದು ತಿಳಿಸಲಾಗಿದೆ.