ಕಾರ್ಕಳ, ಡಿ. 14(DaijiworldNews/AK): ಕಾರ್ಕಳದಿಂದ ಕಳಸಕ್ಕೆ ಹೋಗುತ್ತಿದ್ದ ಟಿ.ಟಿ.ಫೋಸ್೯ ವಾಹನವೊಂದು ಎಸ್ ಕೆ ಬಾರ್ಡರ್ ಮುಂಭಾಗದಲ್ಲಿ ಅಕಸ್ಮಿಕವಾಗಿ ಬೆಂಕಿಗಾಹುತಿಯಾದ ಘಟನೆ ಶನಿವಾರ ಮಧ್ಯಾಹ್ನ ಸಂಭವಿಸಿದೆ.



ಕಟಪಾಡಿಯ ಪ್ರಶಾಂತ ಎಂಬವರಿಗೆ ಸೇರಿದ ವಾಹನ ಅದಾಗಿತ್ತು.ಯಾತ್ರಾರ್ಥಿಗಳು ಕಳಸಕ್ಕೆ ಹೋಗುತ್ತಿದ್ದಾಗ ಎಸ್ ಕೆ ಬಾರ್ಡರ್ ದಾಟಿ ಮುಂದೆ ಹೋಗುತ್ತಿದ್ದಾಗ ಏಕಾಏಕಿ ಹೊಗೆ ಕಾಣಿಸಿಕೊಂಡಿದ್ದು, ಇದರ ಬೆನ್ನಲ್ಲೇ ಕಾಣಿಸಿಕೊಂಡ ಬೆಂಕಿಯ ಜ್ವಾಲೆ ಇಡೀ ಹೊತ್ತಿ ಭಸ್ಮವಾಗಿದೆ.
ಘಟನಾ ಸ್ಥಳದಲ್ಲಿ ಮೊಬೈಲ್ ಸಂಪರ್ಕ ಸಿಗದೇ ಇದ್ದುದರಿಂದ ಮಾಹಿತಿ ಬೆಳಕಿಗೆ ಬರಲು ಒಂದಿಷ್ಟು ತಡವಾಗಿತ್ತು.ಎಸ್ ಕೆ ಬಾರ್ಡರ್ ನಲ್ಲಿ ಕಾರ್ಯ ನಿರ್ವಹಿಸುವ ಅರಣ್ಯ ಇಲಾಖಾ ಸಿಬ್ಬಂದಿಗಳು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ತೆರಳಿದ್ದು, ಅದಾಗಲೇ ವಾಹನ ಸಂಪೂರ್ಣ ಹೊತ್ತಿ ಉರಿದಿದೆ.