ಬಂಟ್ವಾಳ, ಡಿ. 14(DaijiworldNews/AK): ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಗುತ್ತಿಗೆ ವಹಿಸಿಕೊಂಡ ಕೆಎನ್.ಆರ್.ಸಿ.ಕಂಪೆನಿ ಇಂದು ಬೆಳಿಗ್ಗೆ ಮಾಣಿಯಲ್ಲಿ ಜೀವಕ್ಕೆ ಅಪಾಯವಾಗುವ ಕೆಲಸವನ್ನು ಮಾಡಿ ಸಾರ್ವಜನಿಕರ ಅಕ್ರೋಶಕ್ಕೆ ಕಾರಣವಾದ ಘಟನೆ ನಡೆದಿದೆ.

ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಯ ಮಾಣಿ ಸಮೀಪದ ಪಲ್ಕೆ ಎಂಬಲ್ಲಿ ಕೆ.ಎನ್ ಅರ್ ಸಿ ಕಂಪೆನಿಯ ಟಿಪ್ಪರ್ ಚಾಲಕನ ಅವಾಂತರ ಕ್ಕೆ ರಸ್ತೆಗೆ ಹೈ ಟೆನ್ಸ್ ನ ಯಿರುವ ವಿದ್ಯುತ್ ತಂತಿಗಳ ಸಹಿತ ಕಂಬಗಳು ಉರುಳಿ ಬಿದ್ದಿವೆ.
ಘಟನೆಯಿಂದ ಭಾರೀ ದೊಡ್ಡ ದುರಂತವೊಂದು ತಪ್ಪಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.ಕಂಪನಿಯ ಲಾರಿ ಚಾಲಕನ ನಿರ್ಲಕ್ಷ್ಯ ತನಕ್ಕೆ ಇಡೀ ಗ್ರಾಮವೇ ವಿದ್ಯುತ್ ಶಾಕ್ ಗೆ ಬಲಿಯಾಗಬೇಕಿತ್ತು ಎಂದು ಹೇಳಿಕೊಂಡಿದ್ದಾರೆ.
ಮಾಣಿ ಕಡೆಯಿಂದ ಇಲ್ಲೇ ಸಮೀಪದ ಪಲ್ಕೆ ಎಂಬಲ್ಲಿ ನಡೆಯುವ ಅಂಡರ್ ಪಾಸ್ ಕಾಮಗಾರಿ ಹಿನ್ನೆಲೆಯಲ್ಲಿ ರಸ್ತೆ ಗೆ ಮಣ್ಣು ಡಂಪ್ ಮಾಡುವ ಕೆಲಸ ಮಾಡುತ್ತಿದ್ದ. ಆದರೆ ಲಾರಿ ಚಾಲಕ ವಿದ್ಯುತ್ ವಯರಗಳಿರುವುದನ್ನು ಗಮನಿಸದೆ ಅಜಾಗರೂಕತೆಯಿಂದ ಟಿಪ್ಪರ್ ಲಾರಿಯ ಮೂಲಕ ಮಣ್ಣು ಡಂಪ್ ಮಾಡಿದಾಗ ವಿದ್ಯುತ್ ವಯರಗಳಸಹಿತ ಕಂಬಗಳು ಉರುಳಿಬಿದ್ದಿವೆ. ಅದೃಷ್ಟವಶಾತ್ ಲಾರಿಗೆ ಬೆಂಕಿ ಹತ್ತಿಕೊಳ್ಳದೆ ಉಳಿದುಕೊಂಡಿದೆ. ಒಂದು ವೇಳೆ ಘಟನೆಯಲ್ಲಿ ಬೆಂಕಿ ಹತ್ತಿಕೊಂಡಿದ್ದರೆ ಇಲ್ಲಿ ಅನೇಕ ಮನೆಗಳಿಗೆ ಹಾಗೂ ಇಲ್ಲೇ ಹತ್ತಿರದಲ್ಲಿ ಶಾಲೆಗಳಿಗೆ ಕೂಡ ಹಾನಿಯಾಗುವ ಅಪಾಯವು ಹೆಚ್ಚಿತ್ತು ಎಂಬ ಮಾತನ್ನು ಸ್ಥಳೀಯರು ಹೇಳಿಕೊಂಡಿದ್ದಾರೆ.
ಕಂಪೆನಿಯ ಲಾರಿಗಳಿಂದ ಇಂತಹ ಪ್ರಾಣ ಹಾನಿಯಾಗುವ ಘಟನೆಗಳು ನಡೆದಿದ್ದು,ಪೋಲೀಸ್ ಇಲಾಖೆ ಇವರ ಮೇಲೆ ಸೂಕ್ತವಾದ ಕಾನೂನು ಕ್ರಮವನ್ನು ಅನುಸರಿಸಬೇಕು ಎಂಬುದು ಸಾರ್ವಜನಿಕ ಆಗ್ರಹವಾಗಿದೆ.