ಕಾಸರಗೋಡು, ಡಿ. 14(DaijiworldNews/AK):ಸ್ಕೂಟರ್ ಮತ್ತು ಕಾರು ನಡುವೆ ಉಂಟಾದ ಅಪಘಾತದಲ್ಲಿ ಸವಾರ ಮೃತಪಟ್ಟ ಘಟನೆ ಶನಿವಾರ ರಾಷ್ಟ್ರೀಯ ಹೆದ್ದಾರಿಯ ಕುಂಬಳೆ ಶಿರಿಯಾ ದಲ್ಲಿ ನಡೆದಿದೆ.

ಉಪ್ಪಳ ಪ್ರತಾಪ ನಗರದ ಬೀಟಿಗದ್ದೆಯ ಧನ್ ರಾಜ್ (40) ಮೃತಪಟ್ಟವರು . ಗಂಭೀರ ಗಾಯ ಗೊಂಡ ಧನ್ ರಾಜ್ ರನ್ನು ಬಂದ್ಯೋಡಿ ನ ಆಸ್ಪತ್ರೆಗೆ ತಲಪಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟರು.
ಮೃತದೇಹ ವನ್ನು ಕಾಸರಗೋಡು ಜನರಲ್ ಆಸ್ಪತ್ರೆ ಶವ ಗಾರ ದ ಲ್ಲಿ ರಿ ಸಲಾಗಿದೆ. ಧನ್ ರಾಜ್ ಬಿಜೆಪಿ ಕುಂಬಳೆ ಮಂಡಲ ಕಾರ್ಯದರ್ಶಿ ಆಗಿದ್ದರು. ಈ ಹಿಂದೆ ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ , ಮಂಡಲ ಪ್ರಧಾನ ಕಾರ್ಯದರ್ಶಿ ಯಾಗಿ ಸೇವೆ ಸಲ್ಲಿಸಿದ್ದರು. ಕುಂಬಳೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.