ಬಂಟ್ವಾಳ, ಡಿ.15(DaijiworldNews/TA):ಅಡ್ಡೂರು ಸೇತುವೆಯು ಶಿಥಿಲಾವಸ್ಥೆಗೆ ತಲುಪಿರುವ ಹಿನ್ನೆಲೆಯಲ್ಲಿ ಘನ ವಾಹನ ಸಂಚಾರ ನಿಷೇಧಿಸಿ ಎರಡೂ ಬದಿಯಿಂದಲೂ ಕಬ್ಬಿಣದ ಗಾರ್ಡ್ ಅವಳವಡಿಸಲಾಗಿದೆ. ಆದರೆ ಈ ನಡುವೆ ಶನಿವಾರ ತಡರಾತ್ರಿ ಯಾವುದೋ ವಾಹನ ಢಿಕ್ಕಿ ಹೊಡೆದು ಹಾನಿ ಮಾಡಿದೆ.






ಸೇತುವೆಯಲ್ಲಿ ಘನ ವಾಹನ ಸಂಚಾರ ನಿಷೇಧಿಸಲ್ಪಟ್ಟಿರುವುದರಿಂದ ಬಸ್ಸು ಸಂಚಾರವಿಲ್ಲದೆ ಸಾಕಷ್ಟು ತೊಂದರೆಯಾಗಿದೆ. ಹೀಗಾಗಿ ಪರ್ಯಾಯ ವ್ಯವಸ್ಥೆ ಕೈಗೊಳ್ಳಬೇಕು ಎಂದು ಆಗ್ರಹ ಕಳೆದ ಹಲವು ಸಮಯಗಳಿಂದ ಕೇಳಿ ಬರುತ್ತಿದೆ.
ಪ್ರಸ್ತುತ ಅಡ್ಡೂರು ಭಾಗದಲ್ಲಿ ಸೇತುವೆಯ ಗಾರ್ಡ್ ಗೆ ಹಾನಿಯಾಗಿದ್ದು, ವಾಹನ ಯಾವ ರೀತಿ ಢಿಕ್ಕಿ ಹೊಡೆದಿದೆ ಎಂಬ ಸ್ಪಷ್ಟ ಮಾಹಿತಿ ತಿಳಿದುಬಂದಿಲ್ಲ.