ಕಾಸರಗೋಡು, ಡಿ.16(DaijiworldNews/AA): ಬೇಕಲ ಪ್ರವಾಸೋದ್ಯಮ ಯೋಜನೆಯಡಿ ಬೇಕಲದ ಮಲಂಕುನ್ನು ಎಂಬಲ್ಲಿ ಗೇಟ್ವೇ ಬೇಕಲ್ ಫೈವ್ ಸ್ಟಾರ್ ರೆಸಾರ್ಟ್ ಅನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಭಾನುವಾರ ಉದ್ಘಾಟಿಸಿದರು.

ಪ್ರವಾಸೋದ್ಯಮ ಲೋಕೋಪಯೋಗಿ ಇಲಾಖೆ ಸಚಿವ ಪಿ.ಎ.ಮುಹಮ್ಮದ್ ರಿಯಾಝ್ ಅಧ್ಯಕ್ಷತೆ ವಹಿಸಿದ್ದರು. ಸಂಸದ ರಾಜ್ ಮೋಹನ್ ಉಣ್ಣಿತ್ತಾನ್, ಶಾಸಕ ಇ.ಚಂದ್ರಶೇಖರನ್, ಎಂ.ರಾಜಗೋಪಾಲನ್, ಪ್ರವಾಸೋದ್ಯಮ ಮತ್ತು ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಕೆ.ಬಿಜು, ಐಎಚ್ಸಿಎಲ್ನ ಹಿರಿಯ ಉಪಾಧ್ಯಕ್ಷ ಸತ್ಯಜಿತ್ ಕೃಷ್ಣನ್ ಮುಖ್ಯ ಅತಿಥಿಗಳಾಗಿದ್ದರು.
ಕೇರಳದ ಉದ್ಯಮ ಸ್ನೇಹಿ ವಾತಾವರಣವು ಉದ್ಯಮಿಗಳಿಗೆ ಹೆಚ್ಚಿನ ಭರವಸೆ ಮತ್ತು ಆತ್ಮವಿಶ್ವಾಸವನ್ನು ನೀಡುತ್ತದೆ ಮತ್ತು ಅದನ್ನು ಅವರು ಅರಿತುಕೊಂಡಿದ್ದಾರೆ ಎಂದು ಡಾ.ಗೋಪಾಲನ್ ಸಮೂಹದ ನಿರ್ದೇಶಕರು ಹೇಳಿದರು.
ಕೇರಳ ಅತ್ಯಂತ ಪಾರದರ್ಶಕ ಸರ್ಕಾರಿ ವ್ಯವಸ್ಥೆಯಿಂದ ಕೂಡಿದೆ. ಇನ್ನು ಹಲವು ರಾಜ್ಯಗಳಲ್ಲಿ ಈ ಪರಿಸ್ಥಿತಿ ಇಲ್ಲ ಎಂದು
ಸಿ. ಪ್ರಭಾಕರನ್ ಹೇಳಿದರು.
ಗೇಟ್ವೇ ಗ್ರೂಪ್ ಉಪಾಧ್ಯಕ್ಷ ಲೇ ಟಾಟಾ ಅವರು ಗೇಟ್ವೇ ಬ್ರಾಂಡ್ ಅನ್ನು ಪರಿಚಯಿಸಿದರು.
ಜಿಲ್ಲಾ ಪಂಚಾಯಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಜಿಲ್ಲಾಧಿಕಾರಿ ಕೆ.ಇಂಪಾಶೇಖರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಶಿಲ್ಪಾ, ಪ್ರವಾಸೋದ್ಯಮ ನಿರ್ದೇಶಕಿ ಶಿಖಾ ಸುರೇಂದ್ರನ್ ಮೊದಲಾದವರು ಉಪಸ್ಥಿತರಿದ್ದರು.