ಕಾಸರಗೋಡು ,ಡಿ.16(DaijiworldNews/AK): ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ 50 ಗ್ರಾಂ ಎಂ ಡಿ ಎಂ ಎ ಮಾದಕ ವಸ್ತು ಸಹಿತ ಮೂವರನ್ನು ವಿಶೇಷ ಪೊಲೀಸ್ ತಂಡ ಬಂಧಿಸಿದೆ.

ಅಜನೂರು ಮೀನಾಪಿಸ್ ನ ಪಿ . ಅಬ್ದುಲ್ ಹಕೀಮ್ ( 27) , ಕುಂಬಳೆ ಕೊಪ್ಪಳ ಗುಡ್ಡೆಯ ಎ . ಅಬ್ದುಲ್ ರಶೀದ್ ( 26) ಮತ್ತು ಉದುಮ ಪಾಕ್ಯಾರಿನ ಪಿ. ಎಚ್ ಅಬ್ದುಲ್ ರಹಮಾನ್ ( 29) ಬಂಧಿತರು. ಸೋಮವಾರ ಬೆಳಿಗ್ಗೆ ರಾಷ್ಟೀಯ ಹೆದ್ದಾರಿಯ ಪೊಯಿನಾಚಿ ಸಮೀಪದಿಂದ ಬಂಧಿಸಿ ಮಾದಕ ವಸ್ತು ವಶಪಡಿಸಿಕೊಳ್ಳಲಾಗಿದೆ.
ಈ ಪೈಕಿ ಓರ್ವ ಪರಾರಿಯಾಗಿದ್ದಾನೆ. ಪರಾರಿಯಾಗಿರುವ ಮೊಗ್ರಾಲ್ ಪುತ್ತೂರಿನ ಮು ಹಮ್ಮದ್ ಅಶ್ರಫ್ ಎಂಬಾತನಿಗಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ . ಸುಳ್ಯ ದಾರಿಯಾಗಿ ಆಗಮಿಸಿ ಇವರು ಬಂದಡ್ಕ ಮೂಲಕ ಪೊಯಿನಾಚಿ ಗೆ ತಲಪಿದ್ದಾಗಿ ಪೊಲೀಸರು ತಿಳಿಸಿದ್ದಾರೆ .