ಬಂಟ್ವಾಳ, ಡಿ.17(DaijiworldNews/AA): ರೈಲಿನಿಂದ ಬಿದ್ದು ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಇಂದು ಬೆಳಿಗ್ಗೆ ಬಂಟ್ವಾಳ ನಗರ ಪೋಲಿಸ್ ಠಾಣಾ ವ್ಯಾಪ್ತಿಯ ತುಂಬೆ ಸಮೀಪದ ನೆತ್ತರಕೆರೆ ಎಂಬಲ್ಲಿ ನಡೆದಿದೆ.


ಮೃತರನ್ನು ಕಡಬ ತಾಲೂಕಿನ ಬಿಳಿನೆಲೆ ಗೂನಡ್ಕ ನಿವಾಸಿ ಶಶಿಕುಮಾರ್ ಎಸ್. ಎಂದು ಗುರುತಿಸಲಾಗಿದೆ.
ರಾತ್ರಿ ಸುಮಾರು 11 ಗಂಟೆಯ ವೇಳೆ ಸುಬ್ರಮಣ್ಯದಿಂದ ಮಂಗಳೂರಿಗೆ ತೆರಳುತ್ತಿದ್ದ ಪಂಚಗಂಗಾ ಎಕ್ಸ್ ಪ್ರೆಸ್ ನಿಂದ ಕೆಳಗೆ ಬಿದ್ದು ಈತ ಸಾವನ್ನಪ್ಪಿದ್ದಾರೆ.
ಶಶಿಕುಮಾರ್ ಅವರು ರೈಲಿನ ಮೆಟ್ಟಿಲಿನ ಮೇಲೆ ಕುಳಿತು ಪ್ರಯಾಣಿಸುತ್ತಿದ್ದರು. ಇದೇ ವೇಳೆ ಆಯತಪ್ಪಿ ಕೆಳಗೆ ಬೀಳುವುದನ್ನು ಕಂಡು ಬೋಗಿಯಲ್ಲಿದ್ದ ಇತರರು ಮಂಗಳೂರು ರೈಲ್ವೆ ಪೋಲಿಸರಿಗೆ ಮಾಹಿತಿ ನೀಡಿದ್ದಾರೆ. ಅದೇ ವೇಳೆ ರೈಲಿನ ಹಳಿಯ ಸಮೀಪದ ಪೊದೆಯಲ್ಲಿ ತಲೆಗೆ ಏಟು ಬಿದ್ದು ರಕ್ತಸಿಕ್ತ ಸ್ಥಿತಿಯಲ್ಲಿ ಶವಪತ್ತೆಯಾಗಿದ್ದರೂ ಕೂಡ ಈತನ ಹೆಸರು ವಿಳಾಸದ ಮಾಹಿತಿ ಸಿಗುವವಾಗ ತಡವಾಗಿದೆ ಎಂದು ಪೋಲೀಸರು ಮಾಹಿತಿ ನೀಡಿದ್ದಾರೆ.
ಆರಂಭದಲ್ಲಿ ಈತನ ಸಾವಿನ ಬಗ್ಗೆ ಒಂದಷ್ಟು ಗೊಂದಲಗಳು ಇತ್ತಾದರೂ ರೈಲ್ವೆ ಪೋಲೀಸರ ಮಾಹಿತಿ ಬಳಿಕ ಸ್ಪಷ್ಟನೆ ಸಿಕ್ಕಿದೆ.