ಮಂಗಳೂರು,ಡಿ.18(DaijiworldNews/TA): ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಖ್ಯಾತ ನೃತ್ಯ ಗುರು ಕಮಲಾ ಭಟ್ (70) ಅವರು ಮಂಗಳವಾರ ರಾತ್ರಿ ನಿಧನರಾಗಿದ್ದಾರೆ.

ಕರ್ನಾಟಕ ಕಲಾಶ್ರೀ ಪುರಸ್ಕೃತರಾಗಿರುವ ಅವರು ಮಂಗಳೂರು ಉರ್ವಾದ ನಾಟ್ಯಾಲಯ ಸಂಸ್ಥೆಯ ನಿರ್ದೇಶಕರಾಗಿ, ಸುಮಾರು 45 ವರ್ಷಗಳಿಂದ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದರು. ಕಮಲಾ ಭಟ್ ಅವರಿಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಕರ್ನಾಟಕ ಕಲಾ ಶ್ರೀ, ಉಡುಪಿ ಪೇಜಾವರ ಮಠದ ಪ್ರಶಸ್ತಿ ಸಹಿತ ಅನೇಕ ಪ್ರಶಸ್ತಿಗಳು ಲಭಿಸಿವೆ.
ರಾಜ್ಯದ ಪ್ರತಿಷ್ಠಿತ ವೇದಿಕೆಗಳಲ್ಲಿ ನೃತ್ಯ ಕಾರ್ಯಕ್ರಮಗಳ ಮೂಲಕ ಪ್ರಶಂಸೆಗೆ ಪಾತ್ರರಾಗಿದ್ದ ಕಮಲಾ ಭಟ್ ಅವರು ಉಳ್ಳಾಲ ಮೋಹನ್ ಕುಮಾರ್ ರ ಶಿಷ್ಯೆಯಾಗಿದ್ದಾರೆ.