ಕಾಸರಗೋಡು ,ಡಿ.18(DaijiworldNews/AK): ಯು ಎ ಪಿ ಎ ಪ್ರಕರಣ ದಾಖಲಾಗಿ ತಲೆ ಮರೆಸಿಕೊಂಡಿದ್ದ ಅಸ್ಸಾಂ ಮೂಲದ ಆರೋಪಿಯನ್ನು ಅಸ್ಸಾಮ್ ನ ತನಿಖಾ ತಂಡ ಕಾಸರಗೋಡಿನಿಂದ ಬಂಧಿಸಿದೆ.

ಎಂ . ಬಿ ಶಾಬ್ ಶೇಖ್ ( 31) ಬಂಧಿತ ಆರೋಪಿ . ಬುಧವಾರ ಮುಂಜಾನೆ ಪಡನ್ನ ಕ್ಕಾಡ್ ನಿಂದ ಈತನನ್ನು ಬಂಧಿಸಿದೆ. ಖಚಿತ ಮಾಹಿತಿಯಂತೆ ಮುಂಜಾನೆ ಕಾರ್ಯಾಚರಣೆ ನಡೆಸಿ ಈತನನ್ನು ಬಂಧಿಸಲಾಗಿದೆ.
ಈತ ಬಾಂಗ್ಲಾದೇಶದಿಂದ ಭಾರತಕ್ಕೆ ನುಸುಳಿ ಅಸ್ಸಾಂ ನಲ್ಲಿ ತಂಗಿದ್ದನು . ಬಳಿಕ ಭಾರತೀಯ ಪೌರತ್ವ ತೋರಿಸಿ ಈತ ನಕಲಿ ಪಾಸ್ ಪೋರ್ಟ್ ನ್ನು ಪಡೆದ್ದಿದ್ದನು ಎನ್ನಲಾಗಿದೆ . ಇದರಿಂದ ಈತನ ವಿರುದ್ದ ಯು ಎ ಪಿ ಎ ದಾಖಲಿಸಲಾಗಿತ್ತು. ಪಡನ್ನಕ್ಕಾಡ್ ನ ಕ್ವಾಟರ್ಸ್ ವೊಂದರಲ್ಲಿ ಈತ ತಲೆಮರೆಸಿಕೊಂಡಿದ್ದು , ಹೊಸದುರ್ಗ ಪೋಲೀಸರ ಸಹಾಯದಿಂದ ಈತನನ್ನು ಬಂಧಿಸಲಾಗಿದೆ .
ಒಂದು ತಿಂಗಳ ಹಿಂದೆಯಷ್ಟೇ ಈತ ಪಡನ್ನಕಾಡಿಗೆ ತಲಪಿದ್ದನು. ಪೈಂಟಿಂಗ್ ಕೆಲಸ ನಿರ್ವಹಿಸುತ್ತಿದ್ದನು. ಈತನಿಗಾಗಿ ಅಸ್ಸಾಮ್ ಪೊಲೀಸರು ಲುಕ್ ಔಟ್ ನೋಟೀಸ್ ಕಳುಹಿಸಿದ್ದರು. ಹೊಸದುರ್ಗ ನ್ಯಾಯಾಲಯಕ್ಕೆ ಹಾಜರು ಪಡಿಸಿ ಬಳಿಕ ಅಸ್ಸಾಂ ಗೆ ಕೊಂಡೊಯ್ಯಲಾಗಿದೆ .