ಬೆಳ್ತಂಗಡಿ, ಡಿ.19(DaijiworldNews/AA): ಕ್ರಿಸ್ಮಸ್ ಹಬ್ಬಕ್ಕೆ ಮನೆಯಲ್ಲಿ ಲೈಟಿಂಗ್ ಮಾಡುತ್ತಿರುವ ವಿದ್ಯಾರ್ಥಿಯೋರ್ವ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟ ದಾರುಣ ಘಟನೆ ತೆಂಕ ಕಾರಂದೂರು ಗ್ರಾಮದ ಪೇರೋಡಿತ್ತಾಯ ಕಟ್ಟೆ ಶಾಲಾ ಬಳಿ ಸಂಭವಿಸಿದೆ.



ಸ್ಟೀಫನ್(14) ಮೃತಪಟ್ಟ ವಿದ್ಯಾರ್ಥಿ.
ಸ್ಟೀಫನ್ ಬೆಳ್ತಂಗಡಿ ಸೈಂಟ್ ತೆರೆಸ ಶಾಲೆಯಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದ. ಈ ಬಾಲಕನ ತಂದೆ ಹಾಗೂ ತಾಯಿ ಎರಡು ವರ್ಷದ ಹಿಂದೆ ಮೃತಪಟ್ಟಿದ್ದಾರೆ. ಬಾಲಕ ಅಜ್ಜಿ ಮನೆಯಲ್ಲಿ ವಾಸವಿದ್ದ ಎಂದು ತಿಳಿದುಬಂದಿದೆ.