ಉಡುಪಿ, ಜೂ 8 (Daijiworld News/MSP): ಅತಿವೇಗದಲ್ಲಿ ಮುನ್ನುಗ್ಗಿ ಬಂದ ಬಸ್ಸು ತಾವಿದ್ದ ಜೀಪಿಗೆ ಇನ್ನೇನು ಢಿಕ್ಕಿ ಹೊಡೆಯಿತು ಎನ್ನುವ ಭಯದಿಂದ ಇನ್ ಸ್ಪೆಕ್ಟರ್ ಮತ್ತು ಚಾಲಕ ಹೊರಗೆ ಜಿಗಿದ ಘಟನೆ ಗುರುವಾರ ಸಂಜೆ ಉಡುಪಿ ಸರ್ವಿಸ್ ಬಸ್ ನಿಲ್ದಾಣದಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಮಲ್ಪೆಯ ಕರಾವಳಿ ಕಾವಲು ಪಡೆಯ ಇನ್ ಸ್ಪೆಕ್ಟರ್ ಪ್ರಮೋದ್ ಕುಮಾರ್ ಪಿ. ಮತ್ತು ಚಾಲಕ ರಾಮಚಂದ್ರ ಅವರು ನಿಲ್ದಾಣದ ಒಂದು ಬದಿಯಲ್ಲಿ ಜೀಪ್ ನಲ್ಲಿದ್ದಾಗ ಬಸ್ಸೊಂದು ಅತಿ ವೇಗದಿಂದ ಅಪಾಯಕಾರಿಯಾಗಿ ಧಾವಿಸಿತು. ಆದರಿಂದ ತಪ್ಪಿಸಿಕೊಳ್ಳಲು ಇಬ್ಬರೂ ಜೀಪಿನಿಂದ ಹೊರಗೆ ಹಾರಿದರು. ಅತಿವೇಗ ಮತ್ತು ನಿರ್ಲಕ್ಷತನದಿಂದ ಬಸ್ ಚಲಾಯಿಸಿರುವ ಬಗ್ಗೆ ಬಸ್ ಚಾಲಕ ಯೋಗೀಂದ್ರ ವಿರುದ್ದ ಇನ್ ಸ್ಪೆಕ್ಟರ್ ಅವರು ಉಡುಪಿ ಸಂಚಾರ ಠಾಣೆಗೆ ದೂರು ನೀಡಿದ್ದಾರೆ.