ಕಾಸರಗೋಡು,ಡಿ, 21(DaijiworldNews/AK): ಮೊಗ್ರಾಲ್ ಪೇರಾಲ್ ಪೆಟ್ಟೋಡಿ ಮೂಳೆಯ ಅಬ್ದುಲ್ ಸಲಾಂ ( 22) ರನ್ನು ಕತ್ತು ಕೊಯ್ದು ಕೊಲೆ ನಡೆಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರು ಮಂದಿ ತಪ್ಪಿತಸ್ಥರೆಂದು ಜಿಲ್ಲಾ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ. ಇಬ್ಬರನ್ನು ಖುಲಾಸೆಗೊಳಿಸಿದೆ. ಶಿಕ್ಷೆ ಪ್ರಮಾಣವನ್ನು ಸೋಮವಾರ ಪ್ರಕಟಿಸಲಿದೆ.
ಕುಂಬಳೆ ಬದರಿಯಾ ನಗರದ ಸಿದ್ದಿಕ್ ( 46 ) ಉಮ್ಮರ್ ಫಾರೂಕ್ ( 36) , ಪೆರುವಾಡಿನ ಶಹೀರ್ ( 36) , ಪೇರಾಲ್ ನ ನಿಯಾಜ್ ( 28) , ಪೆರುವಾಡ್ ಕೋಟೆಯ ಲತೀಫ್ ( 42) ಆರಿಕ್ಕಾಡಿ ಬಂಬ್ರಾಣದ ಹರೀಶ್ ( 36) ಬಂಧಿತರು. ಅರುಣ್ ಕುಮಾರ್ ಮತ್ತು ಖಲೀಲ್ ರನ್ನು ಖುಲಾಸೆಗೊಳಿಸಿದೆ. 2017 ರ ಏಪ್ರಿಲ್ 30 ರಂದು ಸಂಜೆ ಅಬ್ದುಲ್ ಸಲಾಂ ರನ್ನು ಮೊಗಾರ್ಲ್ ಮಾಲಿಯಂಗರ ಕೋಟೆ ಸಮೀಪ ಕೊಲೆಗೈಯ್ಯಲಾಗಿತ್ತು.
ಸಲಾಂ ಜೊತೆಗಿದ್ದ ನೌಶಾದ್ ನನ್ನು ಇರಿದು ಗಾಯಗೊಳಿಸಲಾಗಿತ್ತು.ಅಬ್ದುಲ್ ಸಲಾಂ ನೇತೃತ್ವದ ತಂಡವು ಆರೋಪಿಯಾಗಿರುವ ಸಿದ್ದಿಕ್ ನ ಮನೆಗೆ ನುಗ್ಗಿ ಕೊಲೆಗೆ ಯತ್ನಿಸಿತ್ತು. ಇದಕ್ಕೆ ಪ್ರತಿಕಾರವಾಗಿ ಈ ಕೃತ್ಯ ನಡೆಸಿರುವುದಾಗಿ ತನಿಖೆಯಿಂದ ತಿಳಿದು ಬಂದಿತ್ತು.