ಉಡುಪಿ, ಡಿ, 21(DaijiworldNews/AK):ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶ್ರೀ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಬಗ್ಗೆ ಅವಹೇಳನಕಾರಿ ಪದ ಬಳಕೆ ಮಾಡಿದ ಬಿಜೆಪಿಯ ಪರಿಷತ್ ಸದಸ್ಯನಾದ ಸಿಟಿ ರವಿ ಯ ಮಾತನ್ನು ತೀವ್ರವಾಗಿ ಖಂಡಿಸಿದ್ದಾರೆ.
ರಾಜ್ಯದಲ್ಲಿ ಮಹಿಳೆಯರಿಗೆ ತೀವ್ರ ಅವಮಾನ ಮಾಡಿದ ಸಿಟಿ ರವಿ ಗೆ ಯಾವ ಕಾರಣಕ್ಕೂ ಪರಿಷತ್ ಸದಸ್ಯನಾಗಿ ಮುಂದುವರಿಯಲು ಅರ್ಹರಿಲ್ಲ ಅವರನ್ನು ಕೂಡಲೇ ಪರಿಷತ್ ಸದಸ್ಯ ಸ್ಥಾನದಿಂದ ಅಮಾನತು ಮಾಡಬೇಕು ಎಂದು ಅಗ್ರಹಿಸಿದ್ದಾರೆ.
ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಮುಂದಿನ ಜಿಲ್ಲೆಗೆ ಬೇಟಿ ನೀಡುವ ಸಂದರ್ಭದಲ್ಲಿ ಜಿಲ್ಲೆಯ ಸಹಸ್ರಾರು ಮಹಿಳೆಯರ ಬೆಂಬಲವನ್ನು ಪ್ರತ್ಯಕ್ಷವಾಗಿ ತೋರಿಸಲಾಗುವದು ಎಂದು ಪ್ರಸಾದ್ ರಾಜ್ ಕಾಂಚನ್ ಅವರು ಪತ್ರಿಕಾ ಪ್ರಕಟಣೆ ಅಲ್ಲಿ ತಿಳಿಸಿದ್ದಾರೆ