ಉಳ್ಳಾಲ,ಡಿ.26(DaijiworldNews/TA): ಮಂಜನಾಡಿ ಗ್ರಾಮದ ಖಂಡಿಕೆ ಎಂಬಲ್ಲಿ ಡಿ.8ಕ್ಕೆ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ತಾಯಿ ಹಾಗೂ ಮೂವರು ಮಕ್ಕಳು ಗಂಭೀರ ಗಾಯಗೊಂಡ ಪ್ರಕರಣದಲ್ಲಿ ಗಂಭೀರ ಗಾಯಗೊಂಡ ಬಾಲಕಿಯೊಬ್ಬಳು ಇಂದು ಸಾವನ್ನಪ್ಪಿದ್ದು, ಈ ಮೂಲಕ ಸಾವಿನ ಸಂಖ್ಯೆ ಎರಡಕ್ಕೇರಿದೆ.

ರಾತ್ರಿ ಮನೆಯಲ್ಲಿ ಮಲಗಿದ್ದ ಸಂದರ್ಭ ಗ್ಯಾಸ್ ಸ್ಫೋಟಗೊಂಡು ಇಡೀ ಮನೆ ಹೊತ್ತಿಯುರಿದು, ಮನೆಯೊಳಗಿದ್ದ ತಾಯಿ ಖುಬ್ರಾ ಹಾಗೂ ಮೂವರು ಮಕ್ಕಳಾದ ಮಹದಿಯಾ, ಮಝಿಯಾ, ಮಾಯಿಝ ಎಂಬವರು ಗಂಭೀರ ಗಾಯಗಳೊಂದಿಗೆ ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಡಿ.13 ಕ್ಕೆ ತಾಯಿ ಖುಬ್ರಾ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು. ಇದೀಗ ಬಾಲಕಿ ಮೆಹದಿಯಾ ಕೂಡ ಸಾವನ್ನಪ್ಪಿದ್ದಾಳೆ. ಮಝಿಯಾ ಮತ್ತು ಮಾಯಿಝ ಇಬ್ಬರಿಗೆ ಚಿಕಿತ್ಸೆ ಮುಂದುವರಿದಿದೆ.