ಮೂಡಿಬಿದಿರಿ,ಡಿ.26(DaijiworldNews/AK): ವಿಶ್ವ ಪ್ರಸಿದ್ಧ ಸಾವಿರ ಕಂಬ ಬಸದಿ ಲಕ್ಷ ದೀಪೋತ್ಸವ ಧಾರ್ಮಿಕ ಸಭೆ ಡಿ. 25 ರಂದು ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಪಟ್ಟಾಚಾರ್ಯ ಮಹಾ ಸ್ವಾಮೀಜಿ ಅಧ್ಯಕ್ಷ ತೆ ಯಲ್ಲಿ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.


ಬಳಿಕ ಅಪೇಕ್ಷಾ ಪೂರ್ಣ ಚಂದ್ರ ಹಾಡಿದಅಪರಾಜಿತ ಶತಕದ ಪರಮಾಪರಂಜ್ಯೋತಿ ಧ್ವನಿ ಸುರುಳಿ ಬಿಡುಗಡೆ ಶ್ರೀಗಳು ನೆರವೇರಿಸಿದರು. ಹಾಗೂ ದೀಪೋತ್ಸವ ನಮ್ಮ ಅಜ್ಞಾನ ದ ಕತ್ತಲೆ ನಿವಾರಿಸಿ ಅಂತರಂಗ ದ ಜ್ಞಾನ ದ ಅರಿವು ಮೂಡಿಸುವ ಹಬ್ಬ ಎಲ್ಲರೊ ಉತ್ತಮ ಅರಿವು ಸಾಹಿತ್ಯ ಸಂಸ್ಕೃತಿ ಯನ್ನು ಅರಾದಿಸುವ ಮನಸು ನಮ್ಮದಾಗಲಿ ಎಂದು ಶುಭ ಹಾರೈಸಿ ಆಶೀರ್ವಾದ ಮಾಡಿದರು.
ಸಾಧಕರಿಗೆ ಸ್ವಾಮೀಜಿ ಯವರಿಂದ ಧವಳತ್ರಯ ಜೈನ ಕಾಶಿ ಟ್ರಸ್ಟ್ (ರಿ ) ವತಿಯಿಂದ ಸಿತಾರ್ ವಾದಕ ರಾಷ್ಟ್ರೀಯ ಪ್ರತಿಭೆ ಸುಮಿತ್ ಸಿಂಗ್ ಪದಂ
ಶ್ರೀಮತಿ ರಶ್ಮಿತಾ ಯುವರಾಜ್ ರಾಜ್ಯೋತ್ಸವ ಪ್ರಶಸ್ತಿ ವಿಜೇತೆ ಅಪೇಕ್ಷಾ ಪೂರ್ಣ ಚಂದ್ರ, ಉದಯೋ ನ್ಮುಖ ಹಾಡುಗಾರ್ತಿ ಕು.ಪ್ರಕೃತಿ ಪೋಲೆoಡ್ ದೇಶ ದ ಖಗೋಳ ವಿಜ್ಞಾನ ವಿಶೇಷ ತರಬೇತಿ ಪಡೆದ ವಿದ್ಯಾರ್ಥಿ ,ಖಗೋಳ ಸಂಶೋಧಕಿ,ಹಾಗೂ ಸುಮಾ, ಆಳ್ವಾಸ್ ಇಂಜಿನಿಯರ್ ಕಾಲೇಜು ಮೂಡುಬಿದಿರೆ ಇವರನ್ನು ಧವಳತ್ರಯ ಜೈನ ಕಾಶಿ ಟ್ರಸ್ಟ್ (ರಿ )ವತಿಯಿಂದ ಸ್ವಾಮೀಜಿ ಸನ್ಮಾನ ಮಾಡಿ ಶ್ರೀ ಫಲ ಮಂತ್ರಾಕ್ಷತೆ ನೀಡಿ ಹರಸಿ ಆಶೀರ್ವಾದ ಮಾಡಿದರು.
ಅತಿಥಿ ಗಳಾಗಿ ಪಟ್ಣ ಶೆಟ್ಟಿ ಸುದೇಶ್ ಕುಮಾರ್,ಆದರ್ಶ್,ಬಸದಿ ಮುಕ್ತೇಸರರು,ಯಂ ಸಿ ಸಿ ಬ್ಯಾಂಕ್ ಅಧ್ಯಕ್ಷ ಬಾಹುಬಲಿ ಪ್ರಸಾದ್ ವಕೀಲರು,ಯುವ ಉದ್ಯಮಿ
ಪೂರ್ಣ ಚಂದ್ರ ಜೈನ್,ಶ್ರೀ ಮಠ ದ ವ್ಯವಸ್ಥಾಪಕ ಸಂಜಯಂತ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
ಸ್ವಸ್ತಿಶ್ರೀ ಕಾಲೇಜು ಪ್ರಾಂಶುಪಾಲೆ ಶ್ರೀಮತಿ ಸೌಮ್ಯ ಶ್ರೀ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮ ಆರಂಭದಲ್ಲಿ ಸ್ಥಳೀಯ ವಿವಿಧ ಜೈನ ಮಹಿಳಾ, ಬಾಲಕ ಭಜನಾ ತಂಡಗಳಿಂದ ಭಜನೆ ನೆರವೇರಿತು.
ಇತ್ತೀಚಿಗೆ ಸ್ವರ್ಗಸ್ಥ ರಾದ ತಬಲಾ ಮಾಂತ್ರಿಕ ಜಾಕಿರ್ ಖಾನ್ ರಿಗೆ ಶ್ರದ್ದಾಂಜಲಿ ಅರ್ಪಿಸ ಲಾಯಿತು ಸ್ವಸ್ತಿಶ್ರೀ ಜೈನ ವಸತಿ ಪ.ಪೂ ಕಾಲೇಜು ವಿದ್ಯಾರ್ಥಿ ನಿ ಯರ ನೃತ್ಯ ಕಾರ್ಯಕ್ರಮ ಬಳಿಕ ಸಿತಾರ್ ವಾದಕ ಡಾ|| ಸುಮಿತ್ ಸಿಂಗ್ ಪದಂ ಅಸಿಸ್ಟೆಂಟ್ ಪ್ರೋ ತಂತಿ ವಾದ್ಯ ಜಲಂದರ್ ಪಂಜಾಬ್ ಇವರ ಸಿತಾರ್ ಶಾಸ್ತ್ರೀಯ ಸಂಗೀತ ವಾದನ ಜರುಗಿತು.
ಆರಂಭ ದಲ್ಲಿ ಶ್ಯಾಮ್ ಕಲ್ಯಾಣ ರಾಗ,ಮೂಲಕ ಆಲಾಪ, ಜೋಡು ಅಲಾಪ, ವಿಲಂಬಿ ತ, ಗತ, ಧ್ರುವ, ಗತ, ಜಾಲ ದ ಮೂಲಕ ಪ್ರೇಕ್ಷಕ ರ ಮನ ರಂಜಿಸಿದರು, ಕೊನೆಗೆ ರಘುಪತಿ ರಾಘವ ರಾಜರಾಮ್ ಮೂಲಕ,ಶ್ರೀಮತಿ ಪದ್ಮ ಪ್ರಿಯ ಹಾಡಿದ ನಮೋಕಾರ ಮಂತ್ರ ಸಾಮೂಹಿಕ ಗಾಯನ ಮೂಲಕ ಸಿತಾರ ತಂತಿ ಯಿಂದ ನಾದ ಹೊಮ್ಮಿಸಿ ಅಧ್ಯಾತ್ಮ ಲೋಕ ದಲ್ಲಿ ತನ್ಮಯ ರಾ ಗುವಂತೆ ಮಾಡಿದರು ತಬಲಾ ದಲ್ಲಿ ಮೂಡುಬಿದಿರೆ ಯ ಯುವ ತಬಲ ವಾದಕ ವಿಘ್ನೇಶ ಉತ್ತಮ ಸಾಥ್ ನೀಡಿದರು ಬಳಿಕ ಭಗವಾನ್ ಚಂದ್ರ ಪ್ರಭ ಸ್ವಾಮಿ ಅಭಿಷೇಕ,ಲಕ್ಷ ದೀಪೋತ್ಸವ ಜರುಗಿತು.
--