ಪಟ್ಟಣಂತಿಟ್ಟ, ಡಿ 2: ಒಖಿ ಚಂಡಮಾರುತ ಅಬ್ಬರದಿಂದ ಕೇರಳದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ ಆಗುತ್ತಿದ್ದು, ಪಂಪಾ ನದಿ ಉಕ್ಕಿ ಹರಿಯುತ್ತಿದೆ.
ಒಖಿ ಚಂಡಮಾರುತದಿಂದ ಕರಾವಳಿ ರಾಜ್ಯಗಳಾದ ಕೇರಳ ಮತ್ತು ತಮಿಳುನಾಡು ತೀವ್ರ ಸಂಕಷ್ಟಕ್ಕೀಡಾಗಿದ್ದು ಒಖಿ ಅಬ್ಬರಕ್ಕೆ ಬಲಿಯಾದವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಬಿರುಗಾಳಿ ಸಹಿತ ಭಾರಿ ಮಳೆ ಮುಂದುವರೆದಿದ್ದು, ಪಂಪಾ ನದಿ ಉಕ್ಕಿ ಹರಿಯುತ್ತಿದೆ. ಅಲ್ಲದೇ ಕನ್ಯಾಕುಮಾರಿಯಿಂದ ಶಬರಿಮಲೆಗೆ ತೆರಳುವ ಹಾದಿಯಲ್ಲಿ ನೂರಾರು ಮರಗಳು ಧರೆಗುರುಳಿವೆ. ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವೂ ಸೈಕ್ಲೋನ್ ಮುಗಿಯುವ ವರೆಗೂ ಶಬರಿ ಯಾತ್ರೆಗೆ ತೆರಳದಂತೆ ಯಾತ್ರಿಕರಿಗೆ ಎಚ್ಚರಿಕೆ ನೀಡಿದೆ.
ಪಂಪಾನದಿ ಸಮೀಪ ವಾಹನಗಳನ್ನು ನಿಲ್ಲಿಸುವ ಸ್ಥಳ ಜಲಾವೃತಗೊಂಡಿದ್ದು, ಶಬರಿಮಲೆಗೆ ತೆರಳುವ ಭಕ್ತರಿಗೆ ಪಂಪಾ ನದಿಯಲ್ಲಿ ಸ್ನಾನ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ. ಇದರಿಂದ ಅಯ್ಯಪ್ಪಮಾಲಾಧಾರಿಗಳುತತ್ತರಿಸಿಹೋಗಿದ್ದಾರೆ.