ಸುಳ್ಯ,ಡಿ.29(DaijiworldNews/TA):ಕಾರುಗಳ ನಡುವೆ ಅಪಘಾತವಾಗಿ ಕಾರು ಚಾಲಕರೊಬ್ಬರಿಗೆ ಗಂಭೀರ ಗಾಯವಾದ ಘಟನೆ ದ.ಕ. ಸಂಪಾಜೆ ಗ್ರಾಮದ ಗಡಿಕಲ್ಲು ಬಳಿ ನಡೆದಿದೆ.


ಮಡಿಕೇರಿ ಕಡೆಯಿಂದ ಮಂಗಳೂರಿಗೆ ಹೋಗುತ್ತಿದ್ದ ಕಾರೊಂದು ಸಂಪಾಜೆ ಗಡಿಕಲ್ಲು ಎಂಬಲ್ಲಿ ಮಸೀದಿ ಕಡೆಗೆ ತಿರುಗುವ ವೇಳೆಗೆ ಕಲ್ಲುಗುಂಡಿಯಿಂದ ಬರುತ್ತಿದ್ದ ಕಾರಿಗೆ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿದೆ. ಗಾಯಗೊಂಡ ಕಾರು ಚಾಲಕನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.