ಉಡುಪಿ, ಡಿ.30(DaijiworldNews/AA): ಕಾರು ಮತ್ತು ದ್ವಿಚಕ್ರವಾಹನದಲ್ಲಿ ಗಾಂಜಾ ಮತ್ತು ಎಂಡಿಎಂಎ ಮಾರಾಟ ಮಾಡಲು ಯತ್ನಿಸುತ್ತಿದ್ದ ನಾಲ್ವರನ್ನು ಉಡುಪಿ ಸೆನ್ ಪೊಲೀಸರು ಡಿ. 28ರಂದು ಮಧ್ಯಾಹ್ನ ವೇಳೆ ಬಂಧಿಸಿದ್ದು, 7,86,330 ರೂ. ಮೌಲ್ಯದ ಸೊತ್ತು ವಶಪಡಿಸಿಕೊಂಡಿದ್ದಾರೆ.





ಕಾಪು ತಾಲೂಕಿನ ಕುರ್ಕಾಲು ಗ್ರಾಮದ ಪ್ರೇಮನಾಥ್ ಯಾನೆ ಪ್ರೇಮ್ ಯಾನೆ ರೇವುನಾಥ್ (23), ಉಡುಪಿ ಪೆರ್ಡೂರಿನ ಶೈಲೇಶ್ ಶೆಟ್ಟಿ (24), ಕಾಪು ಬೊಮ್ಮರಬೆಟ್ಟು ನಿವಾಸಿ ಪ್ರಜ್ವಲ್ (28), ಮತ್ತು ಉಡುಪಿಯ ಬೊಮ್ಮರಬೆಟ್ಟುವಿನ ರತನ್ (27) ಬಂಧಿತರು.
ಬಂಧಿತರಿAದ 87,500 ಮೌಲ್ಯದ 1.112 ಕೆಜಿ ಗಾಂಜಾ, 2,00,000 ರೂ. ಮೌಲ್ಯದ 37.27 ಗ್ರಾಂ ಎಂಡಿಎಂಎ, 4 ಲಕ್ಷ ರೂ. ಮೌಲ್ಯದ ಕಾರು, 50,000 ರೂ. ಮೌಲ್ಯದ ದ್ವಿಚಕ್ರ ವಾಹನ, 7,130 ರೂ. ನಗದು, ಮತ್ತು 41,000 ರೂ. ಮೌಲ್ಯದ 5 ಮೊಬೈಲ್ ಫೋನ್ಗಳು ಸೇರಿ ಒಟ್ಟು 7,86,330ರೂ. ರೂ. ಮೌಲ್ಯದ ಸೊತ್ತನ್ನು ಪೊಲೀಸರು ಜಪ್ತಿ ಮಾಡಿದ್ದಾರೆ ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡಿವೈಎಸ್ಪಿ ಅರವಿಂದ ಎನ್.ಕಲುಗುಜ್ಜಿ ಮತ್ತು ಸೆನ್ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ರಾಮಚಂದ್ರ ನಾಯಕ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಬ್ ಇನ್ಸ್ಪೆಕ್ಟರ್ಗಳಾದ ಪವನ್ ನಾಯಕ್ ಮತ್ತು ಪೊಲೀಸ್ ಸಿಬ್ಬಂದಿಗಳಾದ ಪ್ರವೀಣ್ ಕುಮಾರ್, ಪ್ರವೀಣ್, ರಾಜೇಶ್, ವೆಂಕಟೇಶ್, ದೀಕ್ಷಿತ್, ಮಾಯಪ್ಪ, ಮತ್ತು ಚರಣ್ ರಾಜ್ ಭಾಗವಹಿಸಿದ್ದರು.