ಮಂಗಳೂರು,,ಜೂ 09(DaijiWorldNews/AZM):ಎಮ್ ಆರ್ ಪಿ ಎಲ್ ನಿಂದ ಹೊರಬರುವ ವಿಷ ತ್ಯಾಜ್ಯ ನೀರಿನಿಂದ ಪೆರ್ಮುದೆ ತೋಡಿನ ಮೀನುಗಳ ಮಾರಣ ಹೋಮ ನಡೆದಿದೆ ಎಂದು ಇಲ್ಲಿನ ಸೋಮೇಶ್ವರ ದೇವಸ್ಥಾನದ ಸಮೀಪದ ಜನರು ಆರೋಪಿಸುತ್ತಿದ್ದಾರೆ.
ಎಮ್ ಆರ್ ಪಿಎಲ್ ಕಂಪೆನಿ ವಿಷಕಾರಿ ಕಲುಷಿತ ನೀರು ಪೆರ್ಮುದೆ ತೋಡಿನ ನೀರಿಗೆ ಬಿಡುವುದರಿಂದ ಅದರಲ್ಲಿರುವ ಮೀನುಗಳು, ಹಾವುಗಳೆಲ್ಲ ಸತ್ತು ಬೀಳುತ್ತಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಪ್ರದೇಶದಲ್ಲಿ ಸ್ಥಳೀಯರು ರೋಗದ ಭೀತಿಯನ್ನು ಎದುರಿಸುತ್ತಿದ್ದಾರೆ. ಕಲುಷಿತ ನೀರನ್ನು ಬಿಡುವ ಹಿನ್ನಲೆ ಪರಿಸರ ಹಾಳಾಗಿ ರೋಗಗಳು ಹರಡಬಹುದೆಂಬ ಭೀತಿಯಲ್ಲಿ ಸ್ಥಳೀಯರು ಇದ್ದಾರೆ.
ಅಲ್ಲದೆ ಇಲ್ಲಿಯ ತೋಡಿನ ನೀರು ವಿಷಪೂರಿತವಾಗಿರುವುದರಿಂದ ಅದರಲ್ಲಿರುವ ಮೀನುಗಳು ಹಾವುಗಳು ಸತ್ತು ಹೋಗುತ್ತಿವೆ. ಇನ್ನು ಇಲ್ಲಿಯ ಜಾನುವಾರುಗಳು ಈ ನೀರನ್ನು ಕುಡಿದು ಸಾಯುವ ಪರಿಸ್ಥಿತಿಯು ಎದುರಾಗಬಹುದೆಂದು ಇಲ್ಲಿನ ಜನರು ತಮ್ಮ ಆತಂಕ ವ್ಯಕ್ತಪಡಿಸಿದ್ದಾರೆ.