ಮಂಗಳೂರು, ಡಿ.30(DaijiworldNews/AA): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನವರಿ 17 ರಂದು ಮಂಗಳಾ ಕ್ರೀಡಾಂಗಣದಲ್ಲಿ 'ರಾಜ್ಯ ಒಲಿಂಪಿಕ್ಸ್' ಉದ್ಘಾಟಿಸಲಿದ್ದಾರೆ ಎಂದು ದ.ಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮಾಹಿತಿ ನೀಡಿದ್ದಾರೆ.

ರಾಜ್ಯ ಒಲಿಂಪಿಕ್ಸ್ ಜನವರಿ 17 ರಿಂದ 23 ರವರೆಗೆ ನಡೆಯಲಿದೆ. ಮಂಗಳೂರು ಮತ್ತು ಉಡುಪಿಯ ಹಲವು ಸ್ಥಳಗಳಲ್ಲಿ ಈವೆಂಟ್ಗಳು ನಡೆಯಲಿವೆ. ಮಂಗಳೂರಿನಲ್ಲಿ 12 ಸ್ಪರ್ಧೆಗಳು ಮತ್ತು ಉಡುಪಿಯಲ್ಲಿ 11 ಕ್ರೀಡಾಕೂಟಗಳು ನಡೆಯಲಿವೆ. ಕಳೆದ 7-8 ವರ್ಷಗಳ ಹಿಂದೆ ಧಾರವಾಡದಲ್ಲಿ ಕರ್ನಾಟಕ ರಾಜ್ಯ ಒಲಿಂಪಿಕ್ ಸಂಸ್ಥೆ ಆಯೋಜಿಸಿದ್ದ ಕ್ರೀಡಾಕೂಟ ನಡೆದಿತ್ತು. ಸುಮಾರು 4,000 ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳು ಈವೆಂಟ್ನಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ತಿಳಿಸಿದರು.
ಜನವರಿ 17 ರಿಂದ 23ರವರೆಗೆ ನಡೆಯಲಿರುವ ಈವೆಂಟ್ ಈ ಕೆಳಗಿನಂತಿವೆ:
*ಯುಎಸ್ ಮಲ್ಯ ಒಳಾಂಗಣ ಕ್ರೀಡಾಂಗಣ ಮಣ್ಣಗುಡ್ಡದಲ್ಲಿ ಬಾಸ್ಕೆಟ್ಬಾಲ್ ಮತ್ತು ಫೆನ್ಸಿಂಗ್ ಕ್ರೀಡೆ ನಡೆಯಲಿದೆ.
*ನೆಹರೂ ಮೈದಾನದಲ್ಲಿ ಫುಟ್ಬಾಲ್ ಮತ್ತು ಖೋ ಖೋ ಕ್ರೀಡೆ ನಡೆಯಲಿದೆ.
*ಮಂಗಳಾ ಕ್ರೀಡಾಂಗಣದಲ್ಲಿ ಹ್ಯಾಂಡ್ಬಾಲ್, ನೆಟ್ಬಾಲ್ ಮತ್ತು ವಾಲಿಬಾಲ್ ಕ್ರೀಡೆ ನಡೆಯಲಿದೆ.
*ಬೋಳಾರ್ ಯೆಮ್ಮೆಕೆರೆ ಕ್ರೀಡಾಂಗಣದಲ್ಲಿ ಈಜು ಸ್ಪರ್ಧೆ ನಡೆಯಲಿದೆ.
*ಅಂಬೇಡ್ಕರ್ ಭವನ ಉರ್ವ ಮಳಿಗೆಯಲ್ಲಿ ಭಾರ ಎತ್ತುವ ಸ್ಪರ್ಧೆ ನಡೆಯಲಿದೆ.
*ಕೆಎಂಸಿ ಅತ್ತಾವರದ ಮರೇನಾ ಒಳಾಂಗಣ ಕ್ರೀಡಾಂಗಣದಲ್ಲಿ ಬ್ಯಾಡ್ಮಿಂಟನ್ ಕ್ರೀಡೆ ನಡೆಯಲಿದೆ.
*ರಾಜ್ಯ ನೌಕರರ ಸಭಾಂಗಣ ಹಂಪನಕಟ್ಟೆಯಲ್ಲಿ ವುಶು ಮತ್ತು ಟೇಕ್ವಾಂಡೋ ಕ್ರೀಡೆ ನಡೆಯಲಿದೆ.