ಬಂಟ್ವಾಳ,ಜ.01(DaijiworldNews/TA): ರಿಕ್ಷಾ ಚಾಲಕ ಮಾಲಕರ ಸಂಘ ಬಿಎಂಎಸ್ ಹಾಗೂ ಲಯನ್ಸ್ ಸೇವಾ ಮಂದಿರ ಬಿ.ಸಿ. ರೋಡ್ ಇವರ ಆಶ್ರಯದಲ್ಲಿ ಒಪ್ಟಿಕ್ ವರ್ಲ್ಡ್ ಕಣ್ಣಿನ ಕ್ಲಿನಿಕ್ ಮತ್ತು ಒಪ್ಟಿಕಲ್ಸ್ ಇವರ ಸಹಕಾರದೊಂದಿಗೆ ಡಿಸೆಂಬರ್ 31ರ ಬೆಳಗ್ಗೆ ಉಚಿತ ಕಣ್ಣಿನ ತಪಾಸಣೆ ಮತ್ತು ಕನ್ನಡಕ ವಿತರಣೆಯ ಉದ್ಘಾಟನಾ ಕಾರ್ಯಕ್ರಮ ನಡೆಯಿತು.




ರಾಜ್ಯ ಬಿ ಎಂ ಎಸ್. ನ ಮಾಜಿ ಅಧ್ಯಕ್ಷ ವಿಶ್ವನಾಥ್ ಶೆಟ್ಟಿ, ಬಿ.ಸಿ. ರೋಡ್ ನ ಲಯನ್ಸ್ ಸೇವಾ ಮಂದಿರದ ಅಧ್ಯಕ್ಷ ರಾಧಾಕೃಷ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿರುವ ಬಿಎಂಎಸ್ ಸದಸ್ಯರಾದ ನಾರಾಯಣ ಪೂಜಾರಿ. ಚೇತನ್ ಪಂಚಮಿ. ಕೃಷ್ಣಪ್ಪ ನಾಟಿ. ಕೇಶವ ಇವತ್ತೂರು. ಇವರಿಗೆ ಬಂಟ್ವಾಳ ಬಿಎಂಎಸ್ ರಿಕ್ಷಾ ಚಾಲಕ ಮಾಲಕರ ಸಂಘದ ವತಿಯಿಂದ ಸಹಾಯಧನ ನೀಡಲಾಯಿತು. ಈ ಕಾರ್ಯಕ್ರಮವನ್ನು ವಸಂತ್ ಕುಮಾರ್ ಮಣಿ ಹಳ್ಳ ನಿರ್ವಹಿಸಿ ಸ್ವಾಗತಿಸಿದರು. ಶ್ರೀಕಾಂತ್ ಪಾಣೀರ್ ಧನ್ಯವಾದ ಮಾಡಿದರು.