ಮಂಗಳೂರು, ಜ.03 (DaijiworldNews/AA): ಕರಾವಳಿ ಉತ್ಸವ 2024 ನವೀನ ಪರಿಕಲ್ಪನೆಗಳನ್ನು ಪರಿಚಯಿಸಿದ್ದು, ಈ ಬಾರಿ ಉತ್ಸವದ ಸೃಜನಶೀಲತೆ ಮತ್ತು ಹೊಸ ಪರಿಕಲ್ಪನೆಗಳ ಕಾರ್ಯಗತಗೊಳಿಸುವಿಕೆಗೆ ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.






































ಮುಖ್ಯವಾಗಿ ಕರಾವಳಿ ಉತ್ಸವದಲ್ಲಿ ಅಂಡರ್ವಾಟರ್ ಫಿಶ್ ಟನಲ್ ಎಕ್ಸ್ಪೋ ಮತ್ತು ಕೃತಕ ಅರಣ್ಯದ ಥೀಮ್ ಪಾರ್ಕ್ ಇವೆ. ಇವೆರಡೂ ಈವೆಂಟ್ ಗೆ ಹೆಚ್ಚಿನ ಜನರನ್ನು ಸೆಳೆದಿವೆ.
ಜಿಲ್ಲಾಡಳಿತವು ಅರಣ್ಯ ಇಲಾಖೆ ಸಹಯೋಗದಲ್ಲಿ ಕರಾವಳಿ ಉತ್ಸವ ಮೈದಾನದಲ್ಲಿ ಕೃತಕ ಅರಣ್ಯದ ಥೀಮ್ ಪಾರ್ಕ್ ಅನ್ನು ನಿರ್ಮಿಸಿದೆ. ಈ ಪಾರ್ಕ್ ಅರಣ್ಯದ ಸೂಕ್ಷ್ಮ ವಿವರಗಳಿಗಾಗಿ ಮತ್ತು ಅರಣ್ಯ ಇಲಾಖೆಯು ಮಾಡಿದ ಉತ್ತಮ ಪ್ರಯತ್ನಕ್ಕಾಗಿ ಪ್ರಶಂಸೆಗೆ ಪಾತ್ರವಾಗಿದೆ.
ಅರಣ್ಯ- ಥೀಮ್ ಪಾರ್ಕ್ ನಲ್ಲಿ ಸಣ್ಣ ಭೂಗತ ಸುರಂಗವನ್ನು ವಿಶೇಷ ಬೆಳಕಿನ ವ್ಯವಸ್ಥೆ ಮತ್ತು ಕೃತಕ ಪ್ರಾಣಿಗಳ ಶಬ್ದಗಳೊಂದಿಗೆ ನಿರ್ಮಿಸಲಾಗಿದ್ದು, ಪ್ರವಾಸಿಗರಿಗೆ ನಿಜವಾದ ಅರಣ್ಯಕ್ಕೆ ಭೇಟಿ ನೀಡಿದ ಅನುಭವವನ್ನು ನೀಡುತ್ತದೆ. ಇನ್ನು ಕೃತಕ ಜಲಪಾತ, ಸೇತುವೆ, ಕಡಲತೀರ, ಹಳ್ಳಿಯ ಜೀವನ ಮತ್ತು ಭತ್ತದ ಗದ್ದೆಗಳ ಚಿತ್ರಣ, ಹಾಗೆಯೇ ಅರಣ್ಯ ಇಲಾಖೆಯ ಚೆಕ್ಪೋಸ್ಟ್ಗಳನ್ನು ಈ ಅರಣ್ಯ ಥೀಮ್ ಒಳಗೊಂಡಿದ್ದು, ಉದ್ಯಾನವನದ ಆಕರ್ಷಣೆಯನ್ನು ಇನ್ನಷ್ಟು ಹೆಚ್ಚಿಸಿದೆ.
ಮತ್ತೊಂದು ಪ್ರಮುಖ ಆಕರ್ಷಣೆಯಾದ ಅಂಡರ್ವಾಟರ್ ಫಿಶ್ ಟನಲ್ ಎಕ್ಸ್ಪೋ, ಪ್ರತಿದಿನ ಸಂಜೆ 4 ರಿಂದ ರಾತ್ರಿ 9 ರವರೆಗೆ ತೆರೆದಿರುತ್ತದೆ. ಪ್ರವಾಸಿಗರು 10 ದೊಡ್ಡ ಅಕ್ವೇರಿಯಮ್ಗಳು ಮತ್ತು 4 ಸುರಂಗ-ಆಕಾರದ ಅಕ್ವೇರಿಯಂಗಳಲ್ಲಿ ವಿವಿಧ ಜಾತಿಯ ಮೀನುಗಳನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಇದು ನೀರೊಳಗಿನ ಜೀವವೈವಿಧ್ಯದ ಸಮಗ್ರ ನೋಟವನ್ನು ಪ್ರವಾಸಿಗರಿಗೆ ನೀಡುತ್ತದೆ.
ಫಾರೆಸ್ಟ್-ಥೀಮ್ ಪಾರ್ಕ್ ಮತ್ತು ಅಂಡರ್ವಾಟರ್ ಫಿಶ್ ಟನಲ್ ಎಕ್ಸ್ಪೋ ಎರಡೂ ಪ್ರೇಕ್ಷಕರ ಮೆಚ್ಚಿನ ಈವೆಂಟ್ ಆಗಿ ಮಾರ್ಪಟ್ಟಿವೆ. ವಿಶೇಷವಾಗಿ ಮಕ್ಕಳು ಈವೆಂಟ್ ಒದಗಿಸಿದ ಅನನ್ಯ ಮತ್ತು ಆಕರ್ಷಕವಾದ ಅನುಭವವನ್ನು ಸಂಪೂರ್ಣವಾಗಿ ಆನಂದಿಸುತ್ತಿದ್ದಾರೆ.