ಮಂಗಳೂರು, ಜ.03 (DaijiworldNews/AK): ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ನಗರದ ದಕ್ಷಿಣ ಉಪವಿಭಾಗದ ಮಾದಕ ದ್ರವ್ಯ ನಿಗ್ರಹ ತಂಡ ಕಾರ್ಯಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ಸಿಯಾಗಿದೆ.

ಆರೋಪಿಗಳು ಮೂಡ ಗ್ರಾಮದ ಮೊಹಮ್ಮದ್ ಅಸಿಫ್ (34), ನಿಯಾಜ್(40) ಎಂದು ಗುರುತಿಸಲಾಗಿದೆ. ಮಂಗಳೂರು ಗ್ರಾಮಾಂತರ ಪೊಲೀಸ್ ರಾಣಾ ವ್ಯಾಪ್ತಿಯ ಪಿಲಿಕುಳದ ಬಳಿಯಿರುವ ದೂರದರ್ಶನ ಕೇಂದ್ರದ ಮುಂಭಾಗದ ಗೇಟ್ ಬಳಿ ಆರೋಪಿಗಳು ಅಕ್ರಮವಾಗಿ ಗಾಂಜಾ ತಂದು ಸಾರ್ವಜನಿಕರಿಗೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದು ದಾಳಿ ನಡೆಸಿ ವಶಕ್ಕೆ ಪಡೆಯಲಾಗಿದೆ. ಬಂಧಿತ ಆರೋಪಿತರಿಂದ ಸುಮಾರು ೯೫೮ ಗ್ರಾಂ ಗಾಂಜಾ, ಮೊಬೈಲ್ ಫೋನ್ ಸ್ವಾಧೀನ ಪಡಿಸಿಲಾಗಿದೆ.
ಈ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸ್ ರಾಣೆಯಲ್ಲಿ ಅ.ಕ್ರ ೦೧/೨೦೨೫ ಕಲಂ ೨೦ (’b)(1) abc ndps act 1985 ರಂತೆ ಪ್ರಕರಣ ದಾಖಲಾಗಿದೆ.
ಈ ಕಾರ್ಯಚರಣೆಯಲ್ಲಿ ಪೊಲೀಸ್ ಆಯುಕ್ತರಾದ ಅನುಪಮ್ ಅಗರವಾಲ್ ಅವರ ಮಾರ್ಗದರ್ಶದಂತೆ , ಕಾನೂನು ಸುವ್ಯವಸ್ಥೆ ವಿಭಾಗದ ಪೊಲೀಸ್ ಉಪ ಆಯುಕ್ತರಾದ ಸಿದ್ಧಾರ್ಥ ಗೋಯಲ್ ಐಪಿಎಸ್, ಅಪರಾಧ ಮತ್ತು ಸಂಚಾರ ವಿಭಾಗದ ಪೊಲೀಸ್ ಉಪ ಆಯುಕ್ತ ಕೆ ರವಿಶಂಕರ್ ನಿದೇರ್ಶನದಂತೆ ಮಂಗಳೂರು ದಕ್ಷಿಣ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಧನ್ಯ ಎನ್ ನಾಯಕರವರ ನೇತ್ಋತ್ವದಲ್ಲಿ ಮಂಗಳೂರು ಗ್ರಾಮಾಂತರ ಪೊಲೀಸ್ ರಾಣೆಯ ನಿರೀಕ್ಷಕರಾದ ಕೆ.ಆರ್ ಶಿವಕುಮಾರ್, ಪಿಎಸ್ಐ ಅರುಣ್ ಕುಮಾರ್ ಡಿ. ಮತ್ತು ಮಾದಕ ದ್ರವ್ಯ ನಿಗ್ರಹ ತಂಡದ ಪಿಎಸ್ಐ ಪುನೀತ್ ಹಾಗೂ ಸಿಬ್ಬಂದಿಯವರಾದ ಸಾಜುನಾಯರ್, ಮಹೇಶ್, ಅಕ್ಬರ್ ಮತ್ತು ತಿರುಮಲೇಶ್ರವರು ಕಾರ್ಯಚರಣೆಯಲ್ಲಿ ಭಾಗವಹಿಸಿದ್ದಾರೆ.