ಮಂಗಳೂರು, ಜ.04 (DaijiworldNews/AK):ಅತಿಕ್ರಮ ಪ್ರವೇಶ, ಆಸ್ತಿ ನಾಶ, ಜೀವ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ 24 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕಿಶೋರ್ ಕುಮಾರ್ ಎಂಬಾತನನ್ನು ಮೂಲ್ಕಿ ಪೊಲೀಸರು ಬಂಧಿಸಿದ್ದಾರೆ. ಮಾರ್ಚ್ 22, 2000 ರ ಪ್ರಕರಣವಾಗಿದೆ.

ಕಿಲ್ಪಾಡಿ ಗ್ರಾಮದ ಕಲ್ಲಗುಡ್ಡೆ ನಿವಾಸಿ ಸುಧಾಕರ ಭಂಡಾರಿ ಎಂಬವರು ನೀಡಿದ ದೂರಿನಂತೆ ಕಿಶೋರ್ ಕುಮಾರ್ ಮತ್ತು ಅಶೋಕ ಅವರ ಆಸ್ತಿಗೆ ಅತಿಕ್ರಮ ಪ್ರವೇಶ ಮಾಡಿ ಮರ ಕಡಿದು ಜೀವ ಬೆದರಿಕೆ ಹಾಕಿದ್ದಾರೆ. ಘಟನೆಯ ನಂತರ ಕಿಶೋರ್ ಕುಮಾರ್ ನ್ಯಾಯಾಲಯದ ವಿಚಾರಣೆಯಿಂದ ತಪ್ಪಿಸಿಕೊಳ್ಳುವ ಮೂಲಕ ತಲೆಮರೆಸಿಕೊಂಡಿದ್ದರು. ಈ ಅವಧಿಯಲ್ಲಿ ಅವರ ವಿರುದ್ಧ ದೀರ್ಘ ಬಾಕಿ ಪ್ರಕರಣ (ಎಲ್ಪಿಸಿ) ವಾರಂಟ್ ಹೊರಡಿಸಲಾಗಿತ್ತು.
ಖಚಿತ ಸುಳಿವಿನ ಆಧಾರದ ಮೇಲೆ ಮುಲ್ಕಿ ಠಾಣೆ ಪಿಎಸ್ಐ ಅನಿತಾ ಹೆಚ್ಬಿ, ಪಿಸಿಗಳಾದ ವಾಸುದೇವ ಮತ್ತು ಸಂದೀಪ್ ಅವರೊಂದಿಗೆ 2025ರ ಜನವರಿ 3ರಂದು ಕಿಶೋರ್ ಕುಮಾರ್ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಅವರ ಮಾರ್ಗದರ್ಶನದಲ್ಲಿ ಡಿಸಿಪಿ ಸಿದ್ಧಾರ್ಥ ಗೋಯಲ್ ಮತ್ತು ಡಿಸಿಪಿ ಕೆ ರವಿಶಂಕರ್ ಅವರ ನಿರ್ದೇಶನದಂತೆ ಬಂಧನ ಕಾರ್ಯಾಚರಣೆ ನಡೆಸಲಾಯಿತು. ಮಂಗಳೂರು ಉತ್ತರ ಎಸಿಪಿ ಶ್ರೀಕಾಂತ್ ಮತ್ತು ಮೂಲ್ಕಿ ಠಾಣೆ ಇನ್ಸ್ಪೆಕ್ಟರ್ ವಿದ್ಯಾಧರ ಡಿ ಬೈಕೇರಿಕರ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ.