ಉಡುಪಿ, ಜ.05 (DaijiworldNews/AA): ಎಂಡಿಎಂಎ, ಚರಸ್ ಸೇರಿದಂತೆ ನಿಷೇಧಿತ ಮಾದಕ ದ್ರವ್ಯಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯನ್ನು ನಗರ ಠಾಣಾ ಪೊಲೀಸರು ಜನವರಿ 4ರಂದು ಬಂಧಿಸಿದ್ದಾರೆ.

ಉಪ್ಪೂರು ನಿವಾಸಿ ನಾಗರಾಜ್ (25) ಬಂಧಿತ ಆರೋಪಿ.
ಖಚಿತ ಮಾಹಿತಿ ಮೇರೆಗೆ ಕಾರ್ಯಪ್ರವೃತ್ತರಾದ ನಗರ ಠಾಣೆ ಪೊಲೀಸರು ಶಿವಳ್ಳಿ ಗ್ರಾಮದ ಬೀಡಿನಗುಡ್ಡೆಯಲ್ಲಿಆರೋಪಿಯನ್ನು ಬಂಧಿಸಿದ್ದಾರೆ.
ಕಾರ್ಯಾಚರಣೆ ವೇಳೆ ಪೊಲೀಸರು 2.5 ಲಕ್ಷ ಮೌಲ್ಯದ 49.46 ಗ್ರಾಂ ಎಂಡಿಎಂಎ, 3,500 ರೂ ಮೌಲ್ಯದ 3.86 ಗ್ರಾಂ ಚರಸ್, ಮೊಬೈಲ್ ಫೋನ್ ಮತ್ತು ಸ್ಕೂಟರ್ ಅನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ವಸ್ತುಗಳ ಒಟ್ಟು ಮೌಲ್ಯ 3.25 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಇನ್ನು ಈ ಬಗ್ಗೆ ನಗರ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.