ಕಾರ್ಕಳ, ಜ.05(DaijiworldNews/TA): 2024 ಎ. 25 ರಂದು ಮೂಡಬಿದಿರೆಯ ಮಚಲಿ ಹೊಟೇಲ್ ಬಳಿ ಕೆಲ ಮಾಡಲೆಂದು ನಿಲ್ಲಿಸಿದ 2 ಹಿಟಾಚಿಗಳ 4 ಬ್ಯಾಟರಿಗಳ ಕಳವು ಪ್ರಕರಣವನ್ನು ಪತ್ತೆ ಹಚ್ಚಿದ ಮೂಡುಬಿದಿರೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಮಂಗಳೂರು ಅಳಪೆ ಗ್ರಾಮದ ಪಡೀಲ್ ನ ಮಂಜಳಿಕೆಯ ನಿವಾಸಿ ಧನುಷ್ ಸನಿಲ್ (31), ಮಂಗಳೂರು ಬಜಾಲ್ ನ ಫೈಝಲ್ ನಗರದ ಆಜ್ಮಲ್ (30) ಪ್ರಕರಣದಲ್ಲಿ ಬಂಧಿತರು.

2024 ಎ 25ರಂದು ರಂಜಿತ್ ಎಂಬವರಿಗೆ ಸೇರಿದ ಹಿಟಾಚಿಯನ್ನು ಕೆಲಸ ಮುಗಿಸಿ ಸಂಜೆ ಸುಮಾರು 7 ಗಂಟೆ ಹೊತ್ತಿನಲ್ಲಿ ನಿಲ್ಲಿಸಿದ್ದರು. ಮರುದಿನ ಬೆಳಿಗ್ಗೆ 7 ಗಂಟೆಗೆ ಹಿಟಾಚಿಯ ಬಳಿ ಬಂದು ನೋಡಿದಾಗ ಎರಡೂ ಹಿಟಾಚಿಗಳ 4 ಬ್ಯಾಟರಿಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದರು. ಈ ಬಗ್ಗೆ ಅಂದು ಅವರು ಮೂಡಬಿದ್ರೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು.
ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ Datsun ಕಂಪೆನಿಯ RediGO ಕಾರು ಮತ್ತು ನಾಲ್ಕು ಬ್ಯಾಟರಿಗಳನ್ನು ಪೊಲೀಸರು ಸ್ವಾಧೀನ ಪಡಿಸಿಕೊಂಡಿದ್ದಾರೆ. ಸ್ವಾಧೀನ ಪಡಿಸಿಕೊಂಡ ಸೊತ್ತುಗಳ ಅಂದಾಜು ಮೌಲ್ಯ ರೂ. 2,80,000 ಆಗಿರುತ್ತದೆ.
ಈ ಪ್ರಕರಣದಲ್ಲಿ ಮಂಗಳೂರು ನಗರದ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ರವರ ಮಾರ್ಗದರ್ಶನದಂತೆ, ಡಿಸಿಪಿ ಸಿದ್ದಾರ್ಥ ಗೊಯಲ್ (ಕಾ&ಸು), ಡಿಸಿಪಿ ರವಿಶಂಕರ್ (ಅ & ಸಂ) ಮತ್ತು ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಶ್ರೀಕಾಂತ್. ಕೆ ರವರ ನಿರ್ದೇಶನದಂತೆ ಮೂಡಬಿದಿರೆ ಠಾಣಾ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ ರವರ ನೇತೃತ್ವದ ತಂಡ ಶ್ರೀ ಸಿದ್ದಪ್ಪ ನರನೂರ ಪಿ.ಎಸ್.ಐ, ಮತ್ತು ಠಾಣಾ ಅಪರಾಧ ವಿಭಾಗದ ಸಿಬ್ಬಂದಿಯವರಾದ ಮೊಹಮ್ಮದ್ ಇಕ್ಷಾಲ್, ಮೊಹಮ್ಮದ್ ಹುಸೇನ್, ಅಕೀಲ್ ಅಹಮ್ಮದ್, ನಾಗರಾಜ್, ವೆಂಕಟೇಶ್ ರವರುಗಳು ಕಾರ್ಯಚರಣೆಯಲ್ಲಿ ಪಾಲ್ಗೊಂಡಿರುತ್ತಾರೆ.