ಉಡುಪಿ,ಜ.06(DaijiworldNews/TA): ಸ್ಕೂಟರ್ ನಲ್ಲಿ ಅಪಾಯಕಾರಿ ರೀತಿಯಲ್ಲಿ ವ್ಹೀಲಿಂಗ್ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬೈಕ್ ಸವಾರನನ್ನು ಮಣಿಪಾಲ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಆತ್ರಾಡಿ ಗ್ರಾಮದ ಮಹಮ್ಮದ್ ಆಶಿಕ್ (19) ಎಂದು ಗುರುತಿಸಲಾಗಿದೆ.

ಜನವರಿ 4ರಂದು ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಒಂದು ಹರಿದಾಡಿದ್ದು ಅದರಲ್ಲಿ ಒಬ್ಬ ವ್ಯಕ್ತಿ ಬೈಕ್ ನಲ್ಲಿ ಹಿಂಬದಿಯಲ್ಲಿ ಇನ್ನೊಬ್ಬನನ್ನು ಕೂರಿಸಿಕೊಂಡು ಮಣಿಪಾಲ ಹಾಗೂ ರಜತಾದ್ರಿ ರಸ್ತೆಗಳಲ್ಲಿ ವ್ಹೀಲಿಂಗ್ ನಡೆಸಿದ್ದು, ಕಂಡುಬಂದಿತ್ತು.
ಈ ಬಗ್ಗೆ ಮಣಿಪಾಲ ಠಾಣಾ ಪಿ.ಐ ದೇವರಾಜ್ ಟಿ.ವಿ ನೇತೃತ್ವದ ಪೊಲೀಸ್ ಉಪ ನಿರೀಕ್ಷಕರಾದ ಅನಿಲ್, ಅಕ್ಷಯ ಕುಮಾರಿ, ಸಿಬ್ಬಂದಿ ವಿವೇಕ್, ಪ್ರಸನ್ನ, ಇಮ್ರಾನ್, ಸುರೇಶ್ ಶೆಟ್ಟಿ ಹಾಗೂ ಸುಕುಮಾರ್ ಶೆಟ್ಟಿ ರುದ್ರವ್ವರವರ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.