ಮಂಗಳೂರು, ಜ.07 (DaijiworldNews/AA): ದ.ಕ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ತಂಡವು ಬರ್ಕೆ ಪೊಲೀಸ್ ಠಾಣೆ ಹಾಗೂ ಮಂಗಳೂರು ಮಹಾನಗರ ಪಾಲಿಕೆ ಸಿಬ್ಬಂದಿಗಳ ತಂಡದೊಂದಿಗೆ ನಗರದ ಲಾಲ್ಬಾಗ್ನ ಸಾಯಿಬಿನ್ ಸಂಕೀರ್ಣ, ಬಲ್ಲಾಲ್ಬಾಗ್ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವವರಿಗೆ ಹಾಗೂ ಕೋಟ್ಪ - 2003 ಕಾಯ್ದೆ ಉಲ್ಲಂಘನೆ ಮಾಡಿರುವ ಅಂಗಡಿ ಮಾಲಕರಿಗೆ ಕಾನೂನಿನ ಅನ್ವಯ ದಂಡವಿಧಿಸಿ ಎಚ್ಚರಿಕೆ ನೀಡಿತು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ತಿಮ್ಮಯ್ಯ ಹೆಚ್.ಆರ್. ಇವರ ಆದೇಶದಂತೆ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳಾದ ಡಾ. ನವೀನ್ ಚಂದ್ರ ಕುಲಾಲ್ ಇವರ ನೇತೃತ್ವದಲ್ಲಿ ಕಾಯ್ದೆ ಉಲ್ಲಂಘನೆ ವಿರುದ್ಧ 92 ಪ್ರಕರಣ ದಾಖಲಿಸಲಾಯಿತು.
ಕಾರ್ಯಾಚರಣೆಯ ತಂಡದಲ್ಲಿ ಎಎಸ್ಐ ಸುಧಾಕರ್, ಆರೋಗ್ಯ ನಿರೀಕ್ಷಕರಾದ ದೀಪಿಕಾ, ಪುಂಡಲೀಕ ಲಕಾಟಿ, ಶೃತಿ ಸಾಲ್ಯಾನ್ ಉಪಸ್ಥಿತರಿದ್ದರು.