
ಪೊಲೀಸ್ ಅಧಿಕಾರಿಗಳ ತಂಡ ಮಾಹಿತಿಗಳನ್ನು ಪಡೆದುಕೊಂಡು ತನಿಖೆ ಮುಂದುವರಿಸಿದೆ.
ದರೋಡೆಕೋರರು ಮನೆಯನ್ನು ಪ್ರವೇಶಿಸುತ್ತಿದ್ದಂತೆ ಮನೆಯವರಲ್ಲಿದ್ದ 5 ಮೊಬೈಲ್ ಅನ್ನು ತಮ್ಮ ವಶಕ್ಕೆ ಪಡೆದು ಕೊಂಡಿದ್ದರು. ಅವರು ಹಿಂದಿರುಗುವ ಸಂದರ್ಭ ಇದನ್ನು ಅವರ ಜತೆಯಲ್ಲೇ ತೆಗೆದುಕೊಂಡು ಹೋಗಿದ್ದರೆಂದು ಹೇಳಲಾಗಿತ್ತು.
ಆದರೆ ಮೊಬೈಲ್ ಗಳಿಂದ ಸಿಮ್ ತೆಗೆದು ಮನೆಯ ಮೂರನೇ ಮಹಡಿಯಲ್ಲಿ ಎಸೆದು ಹೋಗಿರುವುದು ಬೆಳಕಿಗೆ ಬಂದಿದೆ. ಸಿಮ್ ಗಳನ್ನು ತುಂಡರಿಸಿ ಅಲ್ಲೇ ಎಸೆದಿದ್ದಾರೆ ಎಂದು ಹೇಳಲಾಗಿದೆ.