ಮಂಗಳೂರು,ಜ.09 (DaijiworldNews/AK): ಮಹಾನಗರಕ್ಕೆ 50 ಶೇ. ಸಂಸ್ಕರಿಸದ ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ಮನಪಾ ವಿರೋಧ ಪಕ್ಷಗಳ ನಾಯಕರ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಎಂದು ಮನಪಾ ಮೇಯರ್ ಮನೋಜ್ ಕುಮಾರ್ ಕೋಡಿಕಲ್ ಸ್ಪಷ್ಟಪಡಿಸಿದ್ದಾರೆ.

ಅವರು ನಗರದ ಬೆಂದೂರ್ ನ ನೀರು ಶುದ್ದೀಕರಣ ಘಟಕಕ್ಕೆ ಭೇಟಿ ನೀಡಿ ಮಾತನಾಡುತ್ತಿದ್ದರು. ತುಂಬೆಯಿಂದ ಮಂಗಳೂರಿಗೆ ಸರಬರಾಜಾಗುವ ನೀರನ್ನು ಅಲ್ಲೇ ಪ್ರಾಥಮಿಕ ಟ್ರೀಟ್ಮೆಂಟ್ ಮೂಲಕ ಬೆಂದೂರ್ ಗೆ ಬಂದು ಅಲ್ಲಿಂದ ಪಣಂಬೂರಿಗೆ ಹೋಗಲಾಗುತ್ತದೆ. ಬಳಿಕ ಅಲ್ಲಿ ಕೂಡ ಟ್ರೀಟ್ಮೆಂಟ್ ಆದ ಬಳಿಕವೇ ಜನರಿಗೆ ವಿತರಿಸುವ ಕಾರ್ಯ ನಡೆಯುತ್ತಿದೆ. ಇದಕ್ಕೆ ಸೂಕ್ತವಾದ ದಾಖಲೆಗಳು ಕೂಡ ಇದೆ ಎಂದು ಅವರು ತಿಳಿಸಿದರು.