ಬಂಟ್ವಾಳ, ಜ.09 (DaijiworldNews/AA): ಆಶಾ ಕಾರ್ಯಕರ್ತೆಯರ ಸಂಘ (ಸಿಐಟಿಯು)ದ ನೂತನ ತಾಲೂಕು ಸಮಿತಿಯು ಆಯ್ಕೆಯಾಗಿದ್ದು, ಬಂಟ್ವಾಳ ತಾಲೂಕು ಅಧ್ಯಕ್ಷರಾಗಿ ಫ್ಲೋಸಿ ವಿಟ್ಲ, ಉಪಾಧ್ಯಕ್ಷರಾಗಿ ರಂಜಿನಿ ಪರಂಗಿಪೇಟೆ, ಪ್ರಧಾನ ಕಾರ್ಯದರ್ಶಿಯಾಗಿ ಸುಮತಿ ಬೆಂಜನಪದವು ಆಯ್ಕೆಯಾಗಿರುತ್ತಾರೆ.



ತಾಲೂಕು ಆಶಾ ಕಾರ್ಯಕರ್ತೆಯರ ತಾಲೂಕು ಸಮಾವೇಶವು ಬಿಸಿರೋಡ್ ಭಾರತ್ ಬಿಲ್ಡಿಂಗಲ್ಲಿ ನಡೆಯಿತು. ಈ ಸಮಾವೇಶದಲ್ಲಿ ನೂತನ ತಾಲೂಕು ಸಮಿತಿಯು ಆಯ್ಕೆ ಮಾಡಲಾಯಿತು. ಸಿಐಟಿಯುನ ಸದಸ್ಯರುಗಳಾಗಿ ಪೂರ್ಣಿಮ, ರೂಪ, ಸ್ನೇಹ, ಮುತ್ತಮ್ಮ, ರಾಜೀವಿ ಅವರುಗಳನ್ನು ಆಯ್ಕೆ ಮಾಡಲಾಯಿತು.
ಸಮಾವೇಶದಲ್ಲಿ ಸಿಐಟಿಯು ದ.ಕ. ಜಿಲ್ಲಾ ಉಪಾಧ್ಯಕ್ಷರಾದ ಬಿ.ಎಂ.ಭಟ್, ದ.ಕ. ಜಿಲ್ಲಾ ರೈತ ಸಂಘದ ಅಧ್ಯಕ್ಷರಾದ ಕೆ.ಯಾಧವ ಶೆಟ್ಟಿ, ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಸಹ ಕಾರ್ಯದರ್ಶಿ ರೇಖಾ ಕುದ್ಯಾಡಿ, ಉಪಾಧ್ಯಕ್ಷರಾದ ರೂಪ ಬೆಂಜನಪದವು ಮೊದಲಾದವರು ಉಪಸ್ಥಿತರಿದ್ದು ಮಾಹಿತಿ ನೀಡಿದರು.
ಸಮಾವೇಶದ ಬಳಿಕ ಸರ್ಕಾರಕ್ಕೆ ಅಧಿಕಾರಿಗಳ ಮೂಲಕ ಮನವಿ ನೀಡಲಾಯಿತು.