ಬಂಟ್ವಾಳ, ಜ.09 (DaijiworldNews/AA): ಸಿಐಟಿಯು ಸಂಯೋಜಿತ ಕರ್ನಾಟಕ ರಾಜ್ಯ ಆಶಾ ಕಾರ್ಯಕರ್ತೆಯರ ಸಂಘ(ಸಿಐಟಿಯು), ಬಂಟ್ವಾಳ ತಾಲೂಕು ಸಮಿತಿಯು ಬಿ.ಎಂ.ಭಟ್ ಅವರ ನೇತೃತ್ವದಲ್ಲಿ ಬಂಟ್ವಾಳ ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೂ, ಬಂಟ್ವಾಳ ತಾಲೂಕು ಆರೋಗ್ಯಾಧಿಕಾರಿಗಳ ಮೂಲಕ ಮಾನ್ಯ ಆರೋಗ್ಯ ಸಚಿವರಿಗೂ ತಮ್ಮ ವೇತನ ಹೆಚ್ಚಳ, ಕೆಲಸದ ಭದ್ರತೆಗೆ ಆಗ್ರಹಿಸಿ ಮನವಿ ನೀಡಿದರು.


ತಮಗೆ ಈಗ ನೀಡುತ್ತಿರುವ ಮಾಸಿಕ ವೇತನ ರೂ 5,000ವನ್ನು ರೂ. 26,000 ಕ್ಕೆ ಏರಿಸಬೇಕು, ಕೆಲಸದ ಭದ್ರತೆ, ಕನಿಷ್ಟ ವೇತನ, ನಿವೃತ್ತಿ ಯೋಜನೆ, ಗ್ರಾಚ್ಯುವಿಟಿ ಮತ್ತು ಪಿಂಚಿಣಿ ಜಾರಿಗೊಳಿಸಬೇಕು, ಸರಕಾರಿ ನೌಕರರೆಂದು ಮಾನ್ಯ ಮಾಡಬೇಕು. ಆನ್ಲೈನ ಕೆಲಸ ಮಾಡಬೇಕಾದರೆ ಸ್ಮಾರ್ಟ್ ಫೋನ್ ಮತ್ತು ಕರೆನ್ಸಿ ಒದಗಿಸಬೇಕು. ಆರೋಗ್ಯ ವಿಮೆ ನೀಡಬೇಕು. ಆಶಾಯೇತರ ಮತ್ತು ಇಲಾಖೇತರ ಕೆಲಸಗಳನ್ನು ಆಶಾ ಕಾರ್ಯರ್ತೆಯರಿಗೆ ನೀಡಬಾರದು.
ಆಶಾ ಕಾರ್ಯಕರ್ತೆಯರಿಗೆ ಪ್ರತಿ ಪಿ.ಎಚ್.ಸಿ ಸೆಂಟರಲ್ಲಿ ಮತ್ತು ಎಲ್ಲಾ ಸರಕಾರಿ ಆಸ್ಪತ್ರೆಗಳಲ್ಲಿ ಪ್ರತ್ಯೇಕ ಒಂದು ವಿಶ್ರಾಂತಿ ಕೊಠಡಿ ಒದಗಿಸಬೇಕು. ಆಶಾ ಕಾರ್ಯಕತೇರಿಗೆ ಪ್ರಯಾಣ ವೆಚ್ಚ ಟಿ.ಎ. & ಡಿ.ಎ. ನೀಡಬೇಕು, ಮೊದಲಾದ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಮನವಿ ನೀಡಲಾಯಿತು.
ಈ ಸಂದರ್ಭ ಬಂಟ್ವಾಳ ತಾಲೂಕು ಸಮಿತಿ ಅಧ್ಯಕ್ಷರಾದ ಫ್ಲೋಸಿ ವಿಟ್ಲ, ಕಾರ್ಯದರ್ಶಿ ಸುಮತಿ, ಉಪಾಧ್ಯಕ್ಷರಾದ ರಂಜಿನಿ ಮೊದಲಾದವರು ಇದ್ದರು.