ಉಡುಪಿ, ಜ.09 (DaijiworldNews/AA): 75 ವರ್ಷದ ವೃದ್ಧರೊಬ್ಬರು ನಾಪತ್ತೆಯಾದ ಘಟನೆ ಉಡುಪಿಯ ಕೊರಂಗ್ರಪಾಡಿ ಗ್ರಾಮದಲ್ಲಿ ನಡೆಸಿದೆ.

ಕಾಣೆಯಾದವರನ್ನು ಕೊರಂಗ್ರಪಾಡಿ ಗ್ರಾಮದ ನಿವಾಸಿ ದೇವದಾಸ್ (75) ಎಂದು ಗುರುತಿಸಲಾಗಿದೆ.
ಸುಧಾಕರ್ (51) ಅವರ ತಂದೆ ದೇವದಾಸ್ ಅವರು ಈ ಹಿಂದೆಯೂ ನಾಪತ್ತೆಯಾಗಿದ್ದು, ಸುಮಾರು ಒಂದು ತಿಂಗಳ ಬಳಿಕ ಪುನಃ ಮನೆಗೆ ಮರಳಿದ್ದರು.
2024ರ ಡಿ. 1ರಂದು ಸಂಜೆ 4:00 ಗಂಟೆಗೆ ದೇವದಾಸ್ ಅವರು ಪೇಟೆಗೆ ತೆರಳಿ ಶೀಘ್ರದಲ್ಲೇ ಹಿಂತಿರುಗುವುದಾಗಿ ಮನೆಯಿಂದ ಹೊರಟಿದ್ದರು. ಆದರೆ ಅಂದು ಮನೆ ಬಿಟ್ಟವರು ಮನೆಗೂ ಹಿಂತಿರುಗದೇ ಸಂಬಂಧಿಕರನ್ನೂ ಸಂಪರ್ಕಿಸದೇ ನಾಪತ್ತೆಯಾಗಿದ್ದಾರೆ. ದೇವದಾಸ್ ಅವರನ್ನು ಪತ್ತೆ ಮಾಡಲು ಸಾಕಷ್ಟು ಹುಡುಕಾಟ ನಡೆಸಿದರೂ ಅವರ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ.
ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೇವದಾಸ್ ಅವರು ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಾಗಿದೆ. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.