ಬಂಟ್ವಾಳ,ಜ.09 (DaijiworldNews/AK): ಶಾಲಾವಿದ್ಯಾರ್ಥಿಗಳು ಸರ್ಕಾರಿ ಬಸ್ಲ್ಲಿ ಪುಟ್ ಪಾತ್ ನಲ್ಲಿ ಜೀವದ ಹಂಗು ತೊರೆದು ನೇತಾಡಿಕೊಂಡು ಹೋಗುವ ದೃಶ್ಯ ರಾಜ್ಯ ಹೆದ್ದಾರಿಯ ಪುಂಜಾಲಕಟ್ಟೆ ಎಂಬಲ್ಲಿ ಕಂಡು ಬಂದಿದೆ.

ಇದು ನಿತ್ಯದ ಸಮಸ್ಯೆಯಾದರು ಪರಿಹಾರ ಮಾಡಬೇಕಾದ ಸಾರಿಗೆ ನಿಗಮ ಮಾತ್ರ ಮೌನವಾಗಿದೆ.ಧರ್ಮಸ್ಥಳದಿಂದ ಮಂಗಳೂರು ಕಡೆಗೆ ಸಂಚಾರ ಮಾಡುತ್ತಿದ್ದ ಕೆ.ಎಸ್.ಆರ್.ಟಿ.ಸಿ.ಬಸ್ ನಲ್ಲಿ ಈ ದೃಶ್ಯ ಸಂಜೆ ವೇಳೆ ಕಂಡು ಬಂದಿದೆ.
ಸಂಜೆ ವೇಳೆ ಶಾಲೆ ಅವಧಿ ಮುಗಿಸಿ ವಿದ್ಯಾರ್ಥಿಗಳು ಮನೆಗೆ ತೆರಳಬೇಕಾದರೆ ಇದು ನಿತ್ಯ ಅನುಭವಿಸಬೇಕಾದ ಸಮಸ್ಯೆಯಾಗಿದೆ.ಬೆಳಿಗ್ಗೆ ಮತ್ತು ಸಂಜೆ ವೇಳೆ ಬಸ್ ನ ಕೊರತೆಯಿಂದ ಶಾಲಾ ಮಕ್ಕಳಿಗೆ ಪ್ರಯಾಣ ಬಸ್ ಪ್ರಯಾಣ ಕಷ್ಟಕರವಾಗಿದೆ. ಅಲ್ಲದೆ ಜೀವದ ಭಯದಲ್ಲೇ ಬಸ್ನಲ್ಲಿ ಪ್ರಯಾಣಿಸಬೇಕಾಗುತ್ತದೆ. ಶಾಲಾ ಕಾಲೇಜಿಗಳಿಗೆ ಬಸ್ ಮೂಲಕ ತೆರಳಬೇಕಾದ ದೂರದೂರಿನ ವಿದ್ಯಾರ್ಥಿಗಳಿಗೆ ಇದೊಂದು ಶಾಪವಾಗಿ ಪರಿಣಮಿಸಿದೆ.
ಸರಕಾರಿ ಬಸ್ ನ ಕಣ್ಣುಮುಚ್ಚಾಲೆ ಆಟದಿಂದ ಮಕ್ಕಳು ಬೆಳಿಗ್ಗೆ ಸರಿಯಾದ ಸಮಯಕ್ಕೆ ತರಗತಿಗೆ ತೆರಳಲು ಮತ್ತು ಸಂಜೆ ವೇಳೆ ಮನೆಗೆ ತಲುಪಲು ಸಾಧ್ಯವಾಗದೆ ಪರದಾಡುವಂತಾಗಿದೆ.ಇದು ನಿತ್ಯದ ಗೋಳಾದರು ಈ ಬಗ್ಗೆ ತಿಳಿದು ಸಮಸ್ಯೆ ಪರಿಹಾರವನ್ನು ಕಾಣಲು ಯಾರು ಮುಂದಾಗಿಲ್ಲ ಎಂಬ ಆರೋಪಗಳು ಇದೀಗ ಕೇಳಿಬಂದಿದೆ.
ರಾಷ್ಟ್ರೀಯ ಹೆದ್ದಾರಿಯ ಬಸ್ ಗಳಲ್ಲಿ ಕೂಡ ಇದೇ ರೀತಿಯ ಸಮಸ್ಯೆ ಕಂಡು ಬರುತ್ತಿದ್ದು. ವಿದ್ಯಾರ್ಥಿಗಳ ಜೀವಕ್ಕೆ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ.ಪುಟ್ ಪಾತ್ ನಲ್ಲಿ ನೇತಾಡುತ್ತಿದ್ದ ವೇಳೆ ಹೊರಕ್ಕೆ ಎಸೆದು ಜೀವ ಹಾನಿಯಗಿರುವ ಅನೇಕ ಘಟನೆಗಳು ನಮ್ಮ ಕಣ್ಣ ಮುಂದೆ ಇದ್ದರೂ ಜನಪ್ರತಿನಿಧಿಗಳಾಗಲಿ , ಅಧಿಕಾರಿಗಳಾಗಲಿ, ಅಥವಾ ಮಕ್ಕಳ ಪರ ಮಾತನಾಡುವ ಸಂಘಟನೆಗಳಾಗಲಿ ಈ ಬಗ್ಗೆ ಸೂಕ್ತವಾದ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿರುವುದು ನಿಜಕಕ್ಕೂ ವಿಪರ್ಯಾಸ ಸಂಗತಿ.