ಕಾಸರಗೋಡು, ಜ.10 (DaijiworldNews/AK):ಯುವ ಕಾಂಗ್ರೆಸ್ ಕಾರ್ಯಕರ್ತರಾದ ಕೃಪೇಶ್ ಮತ್ತು ಶರತ್ ಲಾಲ್ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಐದು ವರ್ಷಗಳ ಶಿಕ್ಷೆಗೆ ಗುರಿಯಾಗಿ ಜಾಮೀನಿನಲ್ಲಿ ಬಿಡುಗಡೆಗೊಂಡ ಮಾಜಿ ಶಾಸಕ ಕೆ.ವಿ ಕುಂಞಿ ರಾಮನ್ ಸೇರಿದಂತೆ ನಾಲ್ವರು ಗುರುವಾರ ಕಣ್ಣೂರು ಸೆಂಟ್ರಲ್ ಜೈಲ್ ನಿಂದ ಬಿಡುಗಡೆಗೊಂಡಿದ್ದು, ಸಿಪಿಎಂ ಕಾರ್ಯಕರ್ತರು ಭವ್ಯ ಸ್ವಾಗತ ನೀಡಿದರು.

ಮುಖಂಡರು ಎಂ.ವಿ ಜಯರಾಜನ್, ಪಿ .ಜಯರಾಜನ್ ನೇತೃತ್ವದಲ್ಲಿ ಸ್ವಾಗತ ನೀಡಲಾಯಿತು. ಕಾಞಿಂಗಾಡ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಮಣಿ ಕಂಠನ್ ರಾಘವನ್ ವೆಳು ತ್ತೋಳಿ, ಕೆ.ವಿ ಭಾಸ್ಕರನ್ ಬಿಡುಗಡೆ ಗೊಂಡವರು.
ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಐದು ವರ್ಷಗಳ ಸಜೆ ವಿಧಿಸಿ ಎರ್ನಾಕುಲಂ ಸಿ ಬಿ ಐ ನ್ಯಾಯಾಲಯ ಜನವರಿ 3 ರಂದು ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲಾಗಿತ್ತು. ಮೇಲ್ಮನವಿಯನ್ನು ಕೈಗೆತ್ತಿಕೊಂಡ ಹೈಕೋರ್ಟ್ ಶಿಕ್ಷೆಗೆ ತಡೆಯಾಜ್ಞೆ ನೀಡಿತ್ತು . ಪ್ರಕರಣದಲ್ಲಿ ಒಟ್ಟು 14 ಮಂದಿ ಆರೋಪಿ ಗಳಿದ್ದು, 10 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.