ಉಡುಪಿ,ಜ.09 (DaijiworldNews/AK): ಸಮಾಜ ಸೇವಕ ಹಾಗೂ ಕಥೋಲಿಕ್ ಸಭಾ ಉಡುಪಿ ವಲಯ ಮಾಜಿ ಅಧ್ಯಕ್ಷರಾದ ಅಲೋಶಿಯಸ್ ಡಿ ಅಲ್ಮೇಡಾ ಅವರು ಜ.10 ರಂದು ನಿಧನರಾದರು.

ಅವರು ಕ್ಯಾಥೋಲಿಕ್ ಸಭಾದ ಅತ್ಯಂತ ಸಕ್ರಿಯ ಸದಸ್ಯರಾಗಿದ್ದರು ಮತ್ತು ಸಂಸ್ಥೆಯ ವಿವಿಧ ಸ್ಥಾನಗಳಲ್ಲಿ ಕೆಲಸ ಮಾಡಿದ್ದಾರೆ. ಉಡುಪಿ ಕೆಥೋಲಿಕ್ ಸಹಕಾರ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅಲೋಶಿಯಸ್ ಡಿ ಅಲ್ಮೇಡಾ ಚರ್ಚ್ ಚಟುವಟಿಕೆಗಳು ಮತ್ತು ಸಾಮಾಜಿಕ ವೇದಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
12ರ ಭಾನುವಾರ ಸಂಜೆ 4.30ಕ್ಕೆ ಕೊಳಲಗಿರಿ ಚರ್ಚ್ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಚರ್ಚ್ ಆವರಣದಲ್ಲಿ ಮಧ್ಯಾಹ್ನ 3:30 ರಿಂದ 4:30 ರವರೆಗೆ ಸಾರ್ವಜನಿಕ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ.