ಕಾರ್ಕಳ, ಜ.11 (DaijiworldNews/AA): ಸುಮಾರು 50 ಅಡಿ ಆಳದ 20ಅಡಿ ನೀರಿರುವ ಬಾವಿಗೆ ಬಿದ್ದಿದ ಮಹಿಳೆಯೊಬ್ಬರನ್ನು ಕಾರ್ಕಳ ಅಗ್ನಿಶಾಮಕ ದಳದವರು ರಕ್ಷಿಸಿದ್ದಾರೆ.

ಕಲ್ಲೊಟ್ಟೆಯ ಅಪೂರ್ವ ಕಂಪೌಂಡ್ ನಲ್ಲಿ ಈ ಘಟನೆ ನಡೆದಿದ್ದು, ಅನಿತಾ ಎಂಬ ಮಹಿಳೆಯನ್ನು ರಕ್ಷಿಸಲಾಗಿದೆ.
ಕಾರ್ಕಳ ಅಗ್ನಿಶಾಮಕ ಠಾಣೆಯ ಅಧಿಕಾರಿ ಆಲ್ಬರ್ಟ್ ಮೋನಿಸ್ ಸಿಬ್ಬಂದಿಗಳಾದ ರೂಪೇಶ್ ಇಡೂರಕರ್, ನಿತ್ಯಾನಂದ ಹರಿಕಾಂತ, ಭೀಮಪ್ಪ ನರಹಟ್ಟಿ, ಸಂಜಯ್ ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡವರು.