ಮಂಗಳೂರು, ಜ.11 (DaijiworldNews/AA): ಮಂಗಳೂರಿನಾದ್ಯಂತ ಕಾಂಕ್ರೀಟ್ ರಸ್ತೆಗಳಲ್ಲಿ ಅಸಮವಾದ ಕೇಬಲ್ ಚೇಂಬರ್ಗಳು ಮತ್ತು ಮ್ಯಾನ್ಹೋಲ್ಗಳು ವಾಹನ ಸವಾರರಿಗೆ ಗಂಭೀರ ಅಪಾಯವನ್ನುಂಟುಮಾಡುತ್ತಿವೆ.











ನಗರದ ಅನೇಕ ರಸ್ತೆಗಳು ಮ್ಯಾನ್ಹೋಲ್ಗಳು ಮತ್ತು ಕೇಬಲ್ ಚೇಂಬರ್ಗಳನ್ನು ಹೊಂದಿದ್ದು, ಅವು ರಸ್ತೆಯ ಮೇಲ್ಮೈಗೆ ಹೊಂದಿಕೆಯಾಗುವುದಿಲ್ಲ. ಇದು ವಾಹನಗಳಿಗೆ ಅಪಾಯವನ್ನು ಸೃಷ್ಟಿಸುತ್ತದೆ.
ಹಲವಾರು ಮ್ಯಾನ್ಹೋಲ್ ಕವರ್ಗಳು ರಸ್ತೆ ಮಟ್ಟಕ್ಕಿಂತ ಕೆಳಮಟ್ಟದಲ್ಲಿರುವುದರಿಂದ ಅವುಗಳು ಹೊಂಡಗಳಂತಾಗಿವೆ. ಜೊತೆಗೆ ಚೂಪಾದ ಅಂಚಿನ ಉಕ್ಕಿನ ಕೇಬಲ್ ಚೇಂಬರ್ಗಳನ್ನು ರಸ್ತೆಗೆ ಸಮತಟ್ಟಾಗಿ ಇರಿಸಲಾಗಿಲ್ಲ.
ಬಂಟ್ಸ್ ಹಾಸ್ಟೆಲ್, ವುಡ್ಲ್ಯಾಂಡ್ ಜಂಕ್ಷನ್, ಮೇರಿಹಿಲ್, ಪಿವಿಎಸ್ ಮತ್ತು ಇತರ ಸ್ಥಳಗಳಲ್ಲಿ ರಸ್ತೆಯಲ್ಲಿ ಅಸಮವಾದ ಕೇಬಲ್ ಚೇಂಬರ್ಗಳು ಮತ್ತು ಮ್ಯಾನ್ಹೋಲ್ಗಳನ್ನು ಕಾಣಬಹುದಾಗಿದ್ದು, ಇದು ವಾಗನ ಸವಾರರಿಗೆ ಅಪಾಯಕಾರಿಯಾಗಿದೆ. ಮುಖ್ಯವಾಗಿ ಇವುಗಳಿಂದಾಗಿ ದ್ವಿಚಕ್ರ ವಾಹನ ಸವಾರರಿಗೆ ಬಹಳ ಸಮಸ್ಯೆ ಎದುರಾಗುತ್ತಿದೆ. ಇನ್ನು ಬಸ್ಸುಗಳು ಅಥವಾ ದೊಡ್ಡ ವಾಹನಗಳು ದ್ವಿಚಕ್ರ ವಾಹನಗಳನ್ನು ಹಿಂಬಾಲಿಸುವಾಗ ವಾಹನಗಳಿಗೆ ಹಾನಿ ಅಥವಾ ಅಪಘಾತಗಳಿಗೆ ಕಾರಣವಾಗುತ್ತವೆ.