ಮಂಗಳೂರು, ಜ.11 (DaijiworldNews/AK): ಉಳ್ಳಾಲ ತಾಲ್ಲೂಕಿನ ಮಂಜಿನಾಡಿ ಗ್ರಾಮದಲ್ಲಿ ಸಿಲಿಂಡರ್ ಸೋರಿಕೆಯಿಂದ ಉಂಟಾದ ಅಗ್ನಿ ಅನಾಹುತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪರಿಹಾರದ ಚೆಕ್ ವಿತರಿಸಿದರು.

ಒಂದೇ ಕುಟುಂಬದ ಖತೀಜತ್ತುಲ್ ಖುಬ್ರ, ಝಲೈಕಾ ಮೆಹ್ದಿ, ಸಲ್ಮಾ ಮಝಿಯಾ ಮೃತಪಟ್ಟವರಾಗಿದ್ದು ಇವರ ಪರವಾಗಿ ತಲಾ ಐದು ಲಕ್ಷದ ಚೆಕ್ ಅನ್ನು (ಒಟ್ಟು 15 ಲಕ್ಷ) ಇವರ ಕುಟುಂಬದ ಸದಸ್ಯರಿಗೆ ಪರಿಹಾರದ ಚೆಕ್ ಅನ್ನು ಮುಖ್ಯಮಂತ್ರಿಗಳು ನೀಡಿದರು.